Tuesday, May 14, 2024
Homeಕರಾವಳಿಟಿಪ್ಪುವಿನ ಪಾಠ ನಾವ್ಯಾಕೆ ಕೇಳಬೇಕು: ಕಲ್ಲಡ್ಕ ಪ್ರಭಾಕರ ಭಟ್

ಟಿಪ್ಪುವಿನ ಪಾಠ ನಾವ್ಯಾಕೆ ಕೇಳಬೇಕು: ಕಲ್ಲಡ್ಕ ಪ್ರಭಾಕರ ಭಟ್

spot_img
- Advertisement -
- Advertisement -

ಮಂಗಳೂರು: ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಪಠ್ಯತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಕೊಣಾಜೆ ಮಂಗಳೂರು ವಿವಿಯಲ್ಲಿ ಮಾಧ್ಯಮಗಳಿಗೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಕ್ರಿಯೆ ನೀಡಿದರು.


ದೇಶ ವಿರೋಧಿಗಳ ಚಿತ್ರಣವನ್ನೇ ಇಲ್ಲಿ ಕಲಿಸಲಾಗಿದೆ. ಅಕ್ಟರ್ ದಿ ಗ್ರೇಟ್, ಔರಂಗ ಜೇಬ್ ಹುಲಿ ಅನ್ನೋ ಪದಗಳನ್ನೇ ಹೇಳಿದ್ದಾರೆ. ಹೀರೋಗಳು ಅಂತ ಯಾರಿದ್ದಾರೋ, ಅವರನ್ನು ಶಿಕ್ಷಣ ವ್ಯವಸ್ಥೆಯಲ್ಲಿ ತೋರಿಸಿಲ್ಲ. ಅವರನ್ನ ಮತ್ತೆ ಹೀರೋ ಮಾಡಲು ಹೊರಟಿರೋ ಸರ್ಕಾರಕ್ಕೆ ಅಭಿನಂದನೆ ಎಂದರು. ಇನ್ನು ಟಿಪ್ಪುವಿನ ಪಾಠ ನಾವ್ಯಾಕೆ ಕೇಳಬೇಕು. ಅವನು ಹಿಂದೂ ಸಮಾಜಕ್ಕೆ ಅನ್ಯಾಯ ಮಾಡಿದವ. ಇಲ್ಲಿನ ರಾಜಕೀಯ ನಾಯಕರಿಗೆ ಅವನ ಅನ್ಯಾಯ ಹೇಳೋ ಧಮ್ ಇಲ್ಲ.

ಚಿಂತಕರು ಅಂದ್ರೆ ಯಾರು,ಚೀನಾ ಮತ್ತು ಅಮೆರಿಕಾದ ಬಗ್ಗೆ ಯೋಚನೆ ಮಾಡೋನು ಚಿಂತಕನಾ? ಭಾರತದ ಬಗ್ಗೆ ಯೋಚನೆ ಮಾಡುವವ ನಿಜವಾದ ಚಿಂತಕ. ಭಾರತ ಕಮ್ಯುನಿಸ್ಟ್ ಆಗಬೇಕು, ಚೀನಾ ಅಗಬೇಕು ಹೇಳೊನು ಚಿಂತಕನಾ ಎಂದು ಪ್ರಶ್ನಿಸಿದರು.

- Advertisement -
spot_img

Latest News

error: Content is protected !!