Saturday, June 13, 2026
Homeಕರಾವಳಿಮಂಗಳೂರು ACB ಹೆಡ್ ಕಾನ್ಟೇಬಲ್ ಹರಿಪ್ರಸಾದ್ ಗೆ ಮುಖ್ಯಮಂತ್ರಿ ಚಿನ್ನದಪದಕ

ಮಂಗಳೂರು ACB ಹೆಡ್ ಕಾನ್ಟೇಬಲ್ ಹರಿಪ್ರಸಾದ್ ಗೆ ಮುಖ್ಯಮಂತ್ರಿ ಚಿನ್ನದಪದಕ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ(ACB) ಹೆಡ್ ಕಾನ್ಟೇಬಲ್ ಅಗಿರುವ ಹರಿಪ್ರಸಾದ್(49)ಗೆ 2022 ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಅಯ್ಕೆಯಾಗಿದ್ದಾರೆ. ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪ್ರಧಾನ ಕಾರ್ಯಕ್ರಮ ನಡೆಯಲಿದೆ‌.

ಹರಿಪ್ರಸಾದ್ 1996 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದು ಪುತ್ತೂರು ಗ್ರಾಮಂತರ, ಪುತ್ತೂರು ನಗರ, ಪಾಂಡೇಶ್ವರ , ಕಡಬ, ಉಪ್ಪಿನಂಗಡಿ, ಬಂಟ್ವಾಳ ಮುಂತಾದ ಪೊಲೀಸ್ ಠಾಣೆಗಳಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ನಂತರ ಕಳೆದ ಐದು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದಲ್ಲಿ(ಎಸಿಬಿ) ಹೆಡ್ ಕಾನ್ಟೇಬಲ್ ಅಗಿ ಕರ್ತವ್ಯದಲ್ಲಿದ್ದಾರೆ.

ಅನೇಕ ಗಂಭೀರ ಅಪರಾಧ ಪ್ರಕರಣ ಹಾಗೂ ಎಸಿಬಿ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳನ್ನು ಹೆಡೆಮುರಿ ಕಟ್ಟಲು ಹಿರಿಯ ಅಧಿಕಾರಿಗಳಿಗೆ ಉತ್ತಮ ರೀತಿಯಲ್ಲಿ ನಿಷ್ಠೆಯಿಂದ ಸಹಾಯ ಮಾಡಿರುತ್ತಾರೆ.

ಹರಿಪ್ರಸಾದ್‌ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನಟ್ಟಿಬೈಲು ನಿವಾಸಿಯಾಗಿದ್ದು ಅವರ ತಂದೆ ಕೆ.ವೆಂಕಟಾಚಲ ನಿವೃತ್ತ ಅಬಕಾರಿ ಇಲಾಖೆಯಲ್ಲಿ ಹೆಡ್ ಗಾರ್ಡ್ ಅಗಿದ್ದರು. ತಂದೆ ಕೆ.ವೆಂಕಟಾಚಲ ಮತ್ತು ತಾಯಿ ಕೆ.ಕಸ್ತೂರಿ ದಂಪತಿಗಳ ಮೊದಲ ಮಗ ಹರಿಪ್ರಸಾದ್.

ಹರಿಪ್ರಸಾದ್ 26 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ

- Advertisement -

Latest News

error: Content is protected !!