Saturday, May 18, 2024
Homeಕರಾವಳಿಬಂಟ್ವಾಳ: ಮೊಬೈಲ್ ಕಳ್ಳತನ ಆರೋಪಿಸಿ ಯುವಕನ ಮೇಲೆ ಹಲ್ಲೆ - ಐವರು ಆರೋಪಿಗಳ ವಿರುದ್ದ ಪ್ರಕರಣ...

ಬಂಟ್ವಾಳ: ಮೊಬೈಲ್ ಕಳ್ಳತನ ಆರೋಪಿಸಿ ಯುವಕನ ಮೇಲೆ ಹಲ್ಲೆ – ಐವರು ಆರೋಪಿಗಳ ವಿರುದ್ದ ಪ್ರಕರಣ ದಾಖಲು

spot_img
- Advertisement -
- Advertisement -

ಮಂಗಳೂರು: ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ್ದ ತಂಡದ ವಿರುದ್ಧ ಬಂಟ್ವಾಳ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಕಲ್ಲಡ್ಕದ ಪಳನೀರು ಬಳಿ ಈ ಘಟನೆ ನಡೆದಿದ್ದು, ಬಾಳ್ತಿಲ ಗ್ರಾಮ ನಿವಾಸಿ ಉದಯ್​ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.

ವೀರಕಂಭ ನಿವಾಸಿ ಶ್ರೀನಿವಾಸ, ಕಲ್ಲಡ್ಕ ನಿವಾಸಿ ಪ್ರಶಾಂತ್ ಹಾಗೂ ಇತರರ ತಂಡ ಕೈ ಹಾಗೂ ಬೆತ್ತದಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಹತ್ತಿರದ ಮನೆಯೊಂದರಲ್ಲಿ ಮೊಬೈಲ್​ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!