Thursday, June 4, 2026
Homeಕರಾವಳಿಬೆಳ್ತಂಗಡಿ: ಬಿಜೆಪಿಯಲ್ಲಿ ಬಿನ್ನಮತ ಸ್ಪೋಟ, ಸಕ್ರೀಯ ಕಾರ್ಯಕರ್ತ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆ

ಬೆಳ್ತಂಗಡಿ: ಬಿಜೆಪಿಯಲ್ಲಿ ಬಿನ್ನಮತ ಸ್ಪೋಟ, ಸಕ್ರೀಯ ಕಾರ್ಯಕರ್ತ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆ

- Advertisement -
- Advertisement -

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ ನಾಯಕರ ಮದ್ಯೆ ಭಿನ್ನಮತ ಸ್ಷೋಟಗೊಂಡಿದ್ದು, 25 ವರ್ಷಗಳಿಂದ ಸಕ್ರೀಯ ಬಿ.ಜೆ.ಪಿ ಕಾರ್ಯಕರ್ತ ಇಂದು ಪಕ್ಷತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಕಡಿರುದ್ಯಾವರ ಗ್ರಾಮ ಪಂಚಾಯತ್ ಬಿಜೆಪಿಯ ನೇಮಣ್ಣ ಗೌಡ, ನಾರಾಯಣ ಗೌಡ ಬರೆ, ಕೊರಗಪ್ಪ ಗೌಡ ಅಂತರ ಇವರು ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಗ್ರಾಮ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ

ಈ ಸಂದರ್ಭದಲ್ಲಿ ಗ್ರಾಮೀಣ ಬ್ಲಾಕ್ ಅಧ್ಯಕ್ಷ ರಂಜನ್ ಗೌಡ,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್,ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಿತ್ ಜೈನ್, ಕಡಿರುದ್ಯಾವರ ಗ್ರಾಮ ಸಮಿತಿ ಅಧ್ಯಕ್ಷ ಲಿಜೋ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ನೇಮಿರಾಜ್, ಸಂತೋಷ್ ಗೌಡ ವಳಂಬ್ರ ,ನಾಗರಾಜ್ ಲ್ಯಾಲ,ಪೌಲೋಸ್ ನೂಜಿ,ರಮೇಶ್ ಗೌಡ,ರಾಜಗೋಪಾಲ್, ಮಹೇಶ್ ಗೌಡ ಕೌಡಂಗೆ ಉಪಸ್ಥಿತರಿದ್ದರು.

- Advertisement -

Latest News

error: Content is protected !!