Friday, June 5, 2026
Homeಕರಾವಳಿಕಡಬ; ಸವಣೂರಿನಲ್ಲಿದ್ದ ಪಿಎಫ್ಐ ಕಚೇರಿಗೆ ಬೀಗ

ಕಡಬ; ಸವಣೂರಿನಲ್ಲಿದ್ದ ಪಿಎಫ್ಐ ಕಚೇರಿಗೆ ಬೀಗ

- Advertisement -
- Advertisement -

ಸವಣೂರು : ಯುಎಪಿಎ ಕಾಯ್ದೆಯಡಿ ಪಿಎಫ್ಐ ಸೇರಿದಂತೆ 8 ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿರುವ ಹಿನ್ನೆಲೆ ಸವಣೂರಿನಲ್ಲಿದ್ದ ಪಿಎಫ್ಐ ಕಚೇರಿಗೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆಯ ವತಿಯಿಂದ ಬೀಗ ಜಡಿದಿದೆ.

ಕೇಂದ್ರ ಸರ್ಕಾರ ಪಿಎಫ್ಐ ಹಾಗೂ ಸಹ ಸಂಘಟನೆಗಳನ್ನು ಬ್ಯಾನ್ ಮಾಡಿದ ಹಿನ್ನೆಲೆಯಲ್ಲಿ ಸಂಘಟನೆಗಳ ಕಚೇರಿಗಳನ್ನು ಸೀಜ್‌ ಮಾಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಮಂಗಳೂರು ನಗರದ ಮೂರು ಉಪವಿಭಾಗದಲ್ಲಿ ಕಾರ್ಯಾಚರಣೆ ಮಾಡಿ ಕಚೇರಿಯಲ್ಲಿನ ವಸ್ತುಗಳನ್ನು ಸೀಜ್ ಮಾಡಿ ಲಾಕ್‌ ಮಾಡಲಾಗಿದೆ .

ಈ ಸಂದರ್ಭದಲ್ಲಿ ಕಡಬ ತಹಶೀಲ್ದಾರ್ ರಮೇಶ್ ಬಾಬು,ಉಪ ತಹಶೀಲ್ದಾರ್ ಮನೋಹರ್,ಬೆಳ್ಳಾರೆ ಪೊಲೀಸ್ ಠಾಣೆಯ ಎಸೈ ಸುಹಾಸ್, ಕಂದಾಯ ನಿರೀಕ್ಷಕ ಪೃಥ್ವಿ , ಗ್ರಾಮಕರಣಿಕ ಬಸವರಾಜು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!