Sunday, April 28, 2024
Homeತಾಜಾ ಸುದ್ದಿಪಿಎಫ್‌ಐ ನಿಷೇಧದ ಹಿನ್ನೆಲೆ: ಸುಪ್ರೀಂಕೋರ್ಟ್​ನಲ್ಲಿ ನಿಷೇಧ ಪ್ರಶ್ನಿಸಲು ಪಿಎಫ್​ಐ ನಾಯಕರ ನಿರ್ಧಾರ

ಪಿಎಫ್‌ಐ ನಿಷೇಧದ ಹಿನ್ನೆಲೆ: ಸುಪ್ರೀಂಕೋರ್ಟ್​ನಲ್ಲಿ ನಿಷೇಧ ಪ್ರಶ್ನಿಸಲು ಪಿಎಫ್​ಐ ನಾಯಕರ ನಿರ್ಧಾರ

spot_img
- Advertisement -
- Advertisement -

ಕೇಂದ್ರ ಸರ್ಕಾರವು ಪಿಎಫ್‌ಐ ನಿಷೇಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸುತ್ತೇವೆ ಎಂದು ಪಿಎಫ್​ಐನ ಅಂಗಸಂಸ್ಥೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಘೋಷಿಸಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಭಾರತದಲ್ಲಿ ತಕ್ಷಣದಿಂದ ಸಂಘಟನೆಯ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸುತ್ತೇವೆ ಎಂದು ಸಿಎಫ್​ಐ ಹೇಳಿದೆ.

ಪಿಎಫ್​ಐ ಮತ್ತು ಸಿಎಫ್​ಐ ವಿರುದ್ಧ ಕೇಂದ್ರ ಸರ್ಕಾರವು ಮಾಡಿರುವ ಎಲ್ಲ ಆರೋಪಗಳನ್ನು ನಿರಾಕರಿಸುತ್ತೇವೆ. ನೆಲದ ಕಾನೂನಿನ ವಿರುದ್ಧ ಯಾವುದೇ ಕೆಲಸ ನಾವು ಮಾಡಿಲ್ಲ ಎಂದು ಸಿಎಫ್​ಐ ತಿಳಿಸಿದೆ. ಸಂಘಟನೆಯ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಬೇಡಿ. ಅಕಸ್ಮಾತ್ ಬೇರೆ ಯಾರಾದರೂ ಸಂಘಟನೆಯ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದರೆ ಅಂಥವರಿಂದ ನೀವು ದೂರ ಇರಿ ಎಂದು ಸಿಎಫ್​ಐ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದೆ.

- Advertisement -
spot_img

Latest News

error: Content is protected !!