Thursday, June 4, 2026
Homeಕರಾವಳಿಕಡಬ: ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಕಳ್ಳ, ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೆಲಸಗಾರನಿಂದಲೇ ಕಳ್ಳತನ...!

ಕಡಬ: ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಕಳ್ಳ, ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೆಲಸಗಾರನಿಂದಲೇ ಕಳ್ಳತನ…!

- Advertisement -
- Advertisement -

ಕಡಬ: ಪೇಟೆಯ ಸಂಗೀತ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವಕನೇ ಅಂಗಡಿಯ ಕ್ಯಾಶ್ ಕೌಂಟರ್ ನಿಂದ ಹಣ ಕದಿಯುತ್ತಿದ್ದ ಘಟನೆ ನಡೆದಿದೆ. ಮಾಲೀಕನಿಲ್ಲದ ವೇಳೆ ಕ್ಯಾಶ್ ನಿಂದಲೆ ಹಣ ಎಗರಿಸುತ್ತಿದ್ದ ಕೆಲಸಗಾರನನ್ನು ಚಂದ್ರ ಅಲಿಯಾಸ್ ಹೈ-ಫೈ ಚಂದ್ರ ಎಂದು ಗುರುತಿಸಲಾಗಿದೆ.

ಕ್ಯಾಶ್ ನಲ್ಲಿ ಪ್ರತಿ ದಿನ ಹಣ ಮಿಸ್ ಆಗುತ್ತಿದ ಬಗ್ಗೆ ಅನುಮಾನಗೊಂಡಿದ್ದ ಮಾಲೀಕ ಎಲೆಕ್ಟ್ರಾನಿಕ್ಸ್ ಅಂಗಡಿಯ ಸಿಸಿ ಕ್ಯಾಮರಾ ಚೆಕ್ ಮಾಡಿದಾಗ ಖಾತರ್ನಾಕ್ ಖದೀಮ ಸಿಕ್ಕಿ ಬಿದ್ದಿದ್ದಾನೆ.

ಚಂದ್ರ ಅಲಿಯಾಸ್ ಹೈ-ಫೈ ಚಂದ್ರ

ಕಳೆದ ಹದಿನೈದು ದಿನಗಳಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಕದ್ದಿರುವ ಬಗ್ಗೆ ಮಾಲೀಕರು ಶಂಕೆ ವ್ಯಕ್ತ ಪಡಿಸಿದ್ದಾರೆ. ಚಂದ್ರ ಕಳೆದ ಒಂಬತ್ತು ತಿಂಗಳಿಂದ ಸಂಗೀತ ಇಲೆಕ್ಟ್ರಾನಿಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಮಾಲೀಕರು ತಿಳಿಸಿದ್ದಾರೆ.

ಮಾಲೀಕನ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡ ಕೆಲಸದಾತ ಚಂದ್ರನ ವಿರುದ್ಧ ಸಂಗೀತ ಎಲೆಕ್ಟ್ರಾನಿಕ್ ಅಂಗಡಿ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!