- Advertisement -
- Advertisement -
ಪುತ್ತೂರು: ಕಬಕದ ಮನೆಯೊಂದರಲ್ಲಿ ಕಳ್ಳತನ ಮಾಡಿದ ಆರೋಪಿಗಳನ್ನು 24 ಗಂಟೆಗಳೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಬಕ ವಿದ್ಯಾಪುರದ ನಿವಾಸಿಗಳಾದ ಸಂಸೀರ್(23) ಹಾಗೂ ಮುಬಾರಕ್ (26) ಬಂಧಿತರು.
ಉರಿಮಜಲು ನಿವಾಸಿ ಮೊಹಮ್ಮದ್ ನೌಫಲ್ ಅವರ ಪತ್ನಿ ರಝೀನ ಎಂಬವರು ಜ. 7 ರಂದು ಕಬಕದ ತನ್ನ ತಂದೆ ಮನೆಗೆ ಬಂದಿದ್ದರು. ಹಾಗೇ ಬಂದವರು, ಚಿನ್ನವನ್ನು ಬೀರುವಿನಲ್ಲಿಟ್ಟಿದ್ದರು. ಆದರೆ ಜ. 10ರಂದು ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಇಪ್ಪತ್ತನಾಲ್ಕು ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ
- Advertisement -