Wednesday, June 24, 2026
Homeಕರಾವಳಿಮಂಗಳೂರುಬಂಟ್ವಾಳ: ಕೇವಲ ಅರ್ಧ ಗಂಟೆಯಲ್ಲಿ ಕಾರಿಂಜೇಶ್ವರನ ಬೆಟ್ಟವನ್ನೇರಿದ ಕರ್ನಾಟಕದ ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್

ಬಂಟ್ವಾಳ: ಕೇವಲ ಅರ್ಧ ಗಂಟೆಯಲ್ಲಿ ಕಾರಿಂಜೇಶ್ವರನ ಬೆಟ್ಟವನ್ನೇರಿದ ಕರ್ನಾಟಕದ ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್

- Advertisement -
- Advertisement -

ಬಂಟ್ವಾಳ: ಕರ್ನಾಟಕದ ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಕೇವಲ ಅರ್ಧ ಗಂಟೆಯಲ್ಲಿ ಕಾರಿಂಜೇಶ್ವರನ ಬೆಟ್ಟವನ್ನೇರಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಕಾರಿಂಜೇಶ್ವರನ ಬೆಟ್ಟ ಹತ್ತಲು ಆರಂಭಿಸಿದ್ದು ,ಕೇವಲ ಅರ್ಧ ತಾಸಿಗಿಂತಲೂ ಮೊದಲೇ ಈಶ್ವರನ ದೇವಾಲಯದ ಮುಂದೆ ಬಂದು ದೇವರಿಗೆ ನಮಸ್ಕರಿಸಿದ್ದಾರೆ. ನೆರೆದವರು ನೋಡುನೋಡುತ್ತಿದ್ದಂತೆ ಬೆಟ್ಟದ ಮೇಲೆ ಏರಿಯೇ ಬಿಟ್ಟಿದ್ದಾರೆ. ಜ್ಯೋತಿರಾಜ್ ಅವರ ಸಾಹಸವನ್ನು ಅಲ್ಲಿದ್ದವರು ಬೆರಗುಗಣ್ಣಿನಿಂದ ನೋಡಿದ್ದಾರೆ. ಬಿಸಿಲಿನ‌ ತಾಪಕ್ಕೆ ಕಾದು ಕಾದು ಸುಡುವ ಕಲ್ಲಿನ ಮೇಲೆ ಸರ ಸರನೇ ಜ್ಯೋತಿರಾಜ್ ಏರುತ್ತಿದ್ದರೆ ಅಲ್ಲಿದ್ದವರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಲೇ ನಿಂತಿದ್ದರು.

ರಸ್ತೆ ಬದಿಯಲ್ಲಿ ಅನಾಥವಾಗಿರುವ ಮಕ್ಕಳಿಗೆ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಿ ಅಮೂಲಕ ಶಿಕ್ಷಣ ನೀಡುವ ಉದ್ದೇಶವನ್ನು ಹೊಂದಿದ್ದಾರೆ. ಕರ್ನಾಟಕದ ಬೇರೆ ಕಡೆಗಳಿಗೆ ತೆರಳಿ ಸಾಹಸ ಪ್ರದರ್ಶನ ಮಾಡುತ್ತಾ ಅದರಲ್ಲಿ ಬಂದ ಹಣವನ್ನು ಸ್ಪೋರ್ಟ್ಸ್ ಕ್ಲಬ್ ಸ್ಥಾಪನೆಗೆ ವಿನಿಯೋಗಿಸುವ ಕನಸು ಅವರದ್ದು ಆಗಿದೆ.ಅವರ ಕನಸಿಗೆ ಕೈಜೋಡಿಸುವವರಿಗಾಗಿ ಅವರು ಕಾದು ಕೂತಿದ್ದಾರೆ.

- Advertisement -

Latest News

error: Content is protected !!