Saturday, May 18, 2024
Homeತಾಜಾ ಸುದ್ದಿ66ನೇ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ: ಭಾಷಣದ ಹೈಲೈಟ್ಸ್ ಇಲ್ಲಿದೆ..

66ನೇ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ: ಭಾಷಣದ ಹೈಲೈಟ್ಸ್ ಇಲ್ಲಿದೆ..

spot_img
- Advertisement -
- Advertisement -

ನವದೆಹಲಿ : ಇಂದು ಮನ್ ಕೀ ಬಾತ್ ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಇಡೀ ವಿಶ್ವಕ್ಕೆ ಕೊರೊನಾ ಸೋಂಕು ಕಂಟಕವಾಗಿದ್ದು, 2020ನ್ನು ಕಷ್ಟದ ಸಮಯ ಎಂದು ಪರಿಗಣಿಸದೇ ಅನ್ ಲಾಕ್ ವೇಳೆಯೇ ಕೊರೊನಾವನ್ನು ಸೋಲಿಸಬೇಕಿದೆ ಎಂದು ಕರೆನೀಡಿದ್ದಾರೆ.

ಕಳೆದ ಆರು ತಿಂಗಳು ನಾವು ಯಾವುದೇ ಕಷ್ಟವಿರಲಿಲ್ಲ:
ಕೊರೊನಾ ಮಹಾಮಾರಿಯಿಂದ ಮನುಕುಲಕ್ಕೆ ಸಂಕಷ್ಟ ಎದುರಾಗಿದೆ. 2020ನೇ ವರ್ಷ ಬೇಗ ಮುಗಿಯುತ್ತಿಲ್ಲ ಎನಿಸುತ್ತದೆ. 2020 ವರ್ಷ ಕೆಲವರಿಗೆ ಇಷ್ಟವಾಗುತ್ತಿದ್ದರೆ, ಇನ್ನು ಕೆಲವರಿಗೆ ಈ ವರ್ಷ ಇಷ್ಟವಾಗುತ್ತಿಲ್ಲ. ಕೊರೊನಾ ಸಂಕಷ್ಟ ಕಾಲದಿಂದ ಯಾವಾಗ ಮುಕ್ತರಾಗುತ್ತೇವೆಂದು ಜನತೆ ಕಾಯುತ್ತಿದ್ದಾರೆ. ಕಳೆದ ಆರು ತಿಂಗಳು ನಾವು ಯಾವುದೇ ಕಷ್ಟವಿಲ್ಲದೇ ಕಳೆದಿದ್ದೇವೆ. ಹೀಗಾಗಿ ಈ ವರ್ಷವನ್ನು ಕಷ್ಟದ ವರ್ಷ ಎಂದು ಪರಿಗಣಿಸಬಾರದು.

ಭಗವದ್ಗೀತೆ ಪಠಣ
ಭಗವದ್ಗೀತೆಯ ಸಾಲುಗಳನ್ನು ಪಠಿಸುವ ಮೂಲಕ ನಾವು ಪರಿಹಾರ ಕಂಡುಕೊಳ್ಳಬಹುದು. ಸವಾಲುಗಳನ್ನು ಮೆಟ್ಟಿ ನಿಂತು ನಾವು ಮುನ್ನಡೆಯಬೇಕು ಎಂದು ಪ್ರಧಾನಿ ಕರೆನೀಡಿದರು.

ಕೊರೊನದೊಂದಿಗೆ ಚಂಡಮಾರುತ
ಪ್ರಸಕ್ತ ವರ್ಷ ಪ್ರಕೃತಿ ವಿಕೋಪಗಳು ಎದುರಾಗಿವೆ. ಪ್ರಸಕ್ತ ವರ್ಷ ಹಲವು ಸವಾಲುಗಳನ್ನು ನೋಡಿದ್ದೇವೆ. ಕೊರೊನಾ ವಿರುದ್ಧ ಸುದೀರ್ಘ ಹೋರಾಟ ನಡೆಯಲಿದೆ. ಕೊರೊನಾ ಜೊತೆಗೆ ಚಂಡಮಾರುತ ಕೂಡ ಹೊಡೆತ ನೀಡಿದೆ.

ಚೀನಾಕ್ಕೆ ತಕ್ಕ ಪ್ರತ್ಯುತ್ತರ
ಇನ್ನು ಈ ಸಂಕಷ್ಟಗಳ ನಡುವೆ ನೆರೆಯ ರಾಷ್ಟ್ರಗಳು ತೊಂದರೆ ನೀಡುತ್ತಿವೆ. ಲಡಾಖ್ ನಲ್ಲಿ ನಮ್ಮ ವೀರ ಯೋಧರು ತಕ್ಕಪ್ರತ್ಯುತ್ತರ ನೀಡಿದ್ದಾರೆ. ಗಡಿಯಲ್ಲಿ ಭಾರತದ ಕಡೆ ಕಣ್ಣೆತ್ತಿ ನೋಡಿದವರಿಗೆ ತಕ್ಕ ಶಾಸ್ತಿ ಆಗಿದೆ. ಈ ವೇಳೆ ಶೌರ್ಯ ಮೆರೆದು ಹುತಾತ್ಮರಾದ ಯೋಧರಿಗೆ ದೇಶವೇ ಶ್ರದ್ದಾಂಜಲಿ ಸಲ್ಲಿಸಿದೆ. ತಮ್ಮ ಮನೆಗಳಿಂದ ಮತ್ತೊಬ್ಬರನ್ನು ಸೇನೆಗೆ ಕಳುಹಿಸುವುದಾಗಿ ಹುತಾತ್ಮರಾದ ಕುಟುಂಬ ಸದಸ್ಯರು ಹೀಗೆ ಹೇಳುತ್ತಿದ್ದಾರೆ ಎಂದರು. ಗಡಿಗಳನ್ನು ರಕ್ಷಣೆ ಮಾಡುವ ವಿಚಾರದಲ್ಲಿ ಸೇನೆಯ ತಾಕತ್ತು ನೋಡಿದ್ದೇವೆ. ಭಾರತ ಸ್ನೇಹ ಬೆಳೆಸಲು ಸಿದ್ದವಿದೆ. ಕಣ್ಣಿನಲ್ಲಿ ಕಣ್ಣು ಇಟ್ಟು ನೋಡಲೂ ಸಿದ್ಧವಿದೆ. ಲಡಾಕ್ ನಲ್ಲಿ ಹುತಾತ್ಮರಾದ ಯೋಧರ ಕುಟುಂಬದಂತೆಯೇ ಪ್ರತಿಯೊಬ್ಬ ಭಾರತೀಯನೂ ನೋವು ಅನುಭವಿಸಿದ್ದಾರೆ.

ಮಕ್ಕಳ, ವೃದ್ಧರ ಆರೋಗ್ಯದ ಕಾಳಜಿ
ಸಜ್ಜನರ ವಿದ್ಯೆ ಜ್ನಾನಕ್ಕಾಗಿ ಇದ್ದು, ಭಾರತ ಇದನ್ನು ಸದುಪಯೋಗ ಪಡಿಸಿಕೊಂಡಿದೆ. ನಮ್ಮ ಗಮನ ಆತ್ಮ ನಿರ್ಭರ ಭಾರತ ನಿರ್ಮಾಣವಾಗಿದೆ. ಅನ್ ಲಾಕ್ ವೇಳೆ ಭಾರತ ಕೊರೊನಾವನ್ನು ಸೋಲಿಸಬೇಕಿದೆ. ಮನೆಯಲ್ಲಿರುವ ಮಕ್ಕಳು, ವೃದ್ಧರ ಆರೋಗ್ಯ ಕಾಪಾಡಬೇಕಿದೆ. ನಿಮ್ಮ ಹಾಗೂ ನಿಮ್ಮವರ ಬಗ್ಗೆ ಜಾಗೃತವಹಿಸಿ ಎಂದು ಕರೆನೀಡಿದ ಮೋದಿ, ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕಿನಿಂದ ಪಾರಾಗಬೇಕೆಂದು ಪ್ರಧಾನಿ ತಿಳಿಸಿದರು.

ಆರ್ಥಿಕತೆಗೆ ಪ್ರಾಮುಖ್ಯತೆ
ಕೊರೊನಾ ಸಂಕಷ್ಟದ ನಡುವೆ ಆರ್ಥಿಕತೆಗೆ ಆದ್ಯತೆ ನೀಡುವುದು ಮುಖ್ಯವಾಗಿದೆ. ಕೊರೊನಾ ನಿಯಂತ್ರಣದ ಜೊತೆಜೊತೆಗೆ ಅರ್ಥವ್ಯವಸ್ಥೆ ಸದೃಢಗೊಳಿಸಬೇಕಿದೆ. ಸಂಕಷ್ಟದ ವೇಳೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಹಲವು ವರ್ಷಗಳಿಂದ ಲಾಕ್ ಆಗಿದ್ದ ಎಷ್ಟೋ ಕ್ಷೇತ್ರಗಳು ಅನ್ ಲಾಕ್ ವೇಳೆ ಅನ್ ಲಾಕ್ ಆಗುತ್ತಿವೆ. ಹಲವು ವರ್ಷಗಳಿಂದ ಕಲ್ಲಿದ್ದಲು ಗಣಿ ಹರಾಜು ಅನ್ ಲಾಕ್ ಆಗಿತ್ತು. ಈಗ ಕಮರ್ಷಿಯಲ್ ಮಾಡುವ ನಿರ್ಧಾರದಿಂದ ವ್ಯವಸ್ಥೆಯೇ ಬದಲಾಗಿದೆ. ನಾವು ಕೃಷಿ ಕ್ಷೇತ್ರವನ್ನು ಅನ್ ಲಾಕ್ ಮಾಡಿದ್ದೇವೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ಸಾಧನೆ ಮಾಡಲಾಗಿದೆ ಎಂದು ಪ್ರಧಾನಿ ಬಣ್ಣಿಸಿದರು.

ಹಿರಿಯರೊಂದಿಗೆ ಸಂವಾದ
ನನ್ನ ಪ್ರೀತಿಯ ಯುವಕರೇ, ಮಕ್ಕಳೆ, ನಿಮ್ಮಲ್ಲಿ ಒಂದು ಮನವಿ ಮಾಡುತ್ತೇನೆ ಎಂದು ಹೇಳಿದ ಪ್ರಧಾನಿ ನಿಮ್ಮ ಮನೆಯಲ್ಲಿರುವ ಹಿರಿಯರ ಜತೆ ಹರಟೆ ಹೊಡೆಯಿರಿ, ಅವರು ಬಾಲ್ಯದಲ್ಲಿ ಹೇಗೆ ಇದ್ದರು, ಯಾವ ಆಟ ಆಡುತ್ತಿದ್ದರು, ಸಂಬಂಧಿಕರ ಜೊತೆಗೆ ಹೇಗೆ ಇರುತ್ತಿದ್ದರು ಎಂದು ಮಾಹಿತಿ ಪಡೆಯಿರಿ. ಈ ಸಂಭಾಷಣೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಎಂದು ಪ್ರಧಾನಿ ತಿಳಿಸಿದರು.

ಕನ್ನಡಿಗನ ಗುಣಗಾನ
ಇನ್ನು ಪರಿಸರ ರಕ್ಷಣೆಗೆ ಪ್ರತಿಯೊಬ್ಬ ನಾಗರಿಕನೂ ಶ್ರಮ ವಹಿಸುತ್ತಿದ್ದಾರೆ. ಕರ್ನಾಟಕದ ಸುಮಾು 80 ವರ್ಷದ ವೃದ್ಧ ಕಾಮೇಗೌಡ ಎಂಬ ರೈತರಿದ್ದಾರೆ. ಅವರ ಸಾಧನೆ ಕೇಳಿದರೆ ಪ್ರತಿಯೊಬ್ಬರು ಆಶ್ಚರ್ಯ ಪಡುತ್ತಾರೆ. ಅವರು 17 ಸಣ್ಣ ಸಣ್ಣ ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ತಮ್ಮ ಗ್ರಾಮದಲ್ಲಿ ನೀರಿನ ಸಮಸ್ಯೆ ಇಲ್ಲವಾಗಿಸಿದ್ದಾರೆ. ಅವರ ಶ್ರಮ ಶ್ಲಾಘನೀಯವಾಗಿದ್ದು, ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

- Advertisement -
spot_img

Latest News

error: Content is protected !!