Saturday, May 18, 2024
Homeಉದ್ಯಮಝೋಮಾಟೊದಲ್ಲಿ ಚೀನಾ ಹೂಡಿಕೆ: ದೇಶಭಕ್ತಿಗಿಂತ ಯಾವುದು ದೊಡ್ಡದಲ್ಲ ಎಂದು ಕೆಲಸವೇ ಬಿಟ್ಟ ಝೋಮಾಟೊ ಸಿಬ್ಬಂದಿಗಳು

ಝೋಮಾಟೊದಲ್ಲಿ ಚೀನಾ ಹೂಡಿಕೆ: ದೇಶಭಕ್ತಿಗಿಂತ ಯಾವುದು ದೊಡ್ಡದಲ್ಲ ಎಂದು ಕೆಲಸವೇ ಬಿಟ್ಟ ಝೋಮಾಟೊ ಸಿಬ್ಬಂದಿಗಳು

spot_img
- Advertisement -
- Advertisement -

ಕೋಲ್ಕತ್ತ: ಕಳೆದ ವಾರ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾ ಸೈನಿಕರ ಜತೆ ನಡೆದ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಚೀನಾ ಸೇನಾಪಡೆಯ ಈ ಕೃತ್ಯವನ್ನು ಖಂಡಿಸಿ ಚೀನಾ ಮೂಲದ ಜೊಮ್ಯಾಟೊ ಕಂಪನಿಯ ಕೋಲ್ಕತ್ತದ ನೌಕರರು ತಮ್ಮ ಕಂಪನಿ ಟೀಶರ್ಟ್ ಸುಟ್ಟು ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಹಾಗೆಯೆ ಜನರು ಆಹಾರ ವಸ್ತುಗಳನ್ನು ಜೊಮ್ಯಾಟೊ ಮೂಲಕ ತರಿಸುವುದನ್ನು ನಿಲ್ಲಿಸಬೇಕು ಎಂದು ನೌಕರರು ಆಗ್ರಹಿಸಿದ್ದಾರೆ. ಅದೇ ವೇಳೆ ಕೆಲವು ನೌಕರರು ಕೆಲಸ ತೊರೆದಿರುವುದಾಗಿ ಹೇಳಿದ್ದಾರೆ.

ನೀವು ದೇಶಭಕ್ತರೇ ಆಗಿದ್ದಲ್ಲಿ, ದಯವಿಟ್ಟು ಜೊಮ್ಯಾಟೊದಿಂದ ಆನ್‌ಲೈನ್‌ ಮೂಲಕ ಆರ್ಡರ್‌ ಮಾಡುವುದನ್ನು ನಿಲ್ಲಿಸಿ. ನಿಮಗೆ ಬುದ್ಧಿ ಹೇಳುವ ಮುನ್ನ ನಾವು ಈ ಕೃತ್ಯವನ್ನು ಮಾಡಿ ತೋರಿಸುವ ಸಲುವಾಗಿಯೇ ಕೆಲಸವನ್ನು ತ್ಯಜಿಸಿದ್ದೇವೆ. ಈ ಸಮಯದಲ್ಲಿ ಉದ್ಯೋಗ ದೊರಕುವುದು ಕಷ್ಟ ಎನ್ನುವುದು ನಮಗೂ ಗೊತ್ತು. ಆದರೆ ಚೀನಾದಂಥ ನೀಚ ದೇಶದಿಂದ ಬಂದಿರುವ ಆದಾಯವನ್ನು ಅವಲಂಬಿಸಬಾರದು ಎನ್ನುವ ಕಾರಣಕ್ಕೇ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ದಯವಿಟ್ಟು ಎಲ್ಲರೂ ಇದಕ್ಕೆ ಸಹಕರಿಸಿ ನಿಮ್ಮ ಕೈಲಾದಷ್ಟು ದೇಶಭಕ್ತಿ ಮೆರೆಯಿರಿ ಎಂದಿದ್ದಾರೆ.

2018ರಲ್ಲಿ ಚೀನಾದ ಪ್ರಮುಖ ಸಂಸ್ಥೆಯಾದ ಅಲಿಬಾಬಾ ಗ್ರೂಪ್‌ನ ಅಂಗವಾದ ಆಂಟ್ ಫಿನಾನ್ಶಿಯಲ್ ಜೊಮ್ಯಾಟೊ ಕಂಪನಿಯಲ್ಲಿ 210 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ನಡೆಸಿತ್ತು. ಇತ್ತೀಚೆಗೆ ಆಂಟ್ ಫಿನಾನ್ಶಿಯಲ್ 150 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ.

ಮೇ ತಿಂಗಳಲ್ಲಿ ಜೊಮ್ಯಾಟೊ 520 ನೌಕರರನ್ನು ವಜಾ ಮಾಡಿತ್ತು. ಈ ಪ್ರತಿಭಟನೆ ಬಗ್ಗೆ ಜೊಮ್ಯಾಟೊ ಈವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

- Advertisement -
spot_img

Latest News

error: Content is protected !!