- Advertisement -
- Advertisement -
ದಾವಣಗೆರೆ: ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಅವರಿಗೆ ಜೆ.ಎಂ. ಇಮಾಂ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಪ್ರಥಮ ವಿರೋಧ ಪಕ್ಷದ ನಾಯಕ ದಿವಂಗತ ಜೆ.ಎಂ. ಇಮಾಂ ಹೆಸರಿನಲ್ಲಿ ನೀಡುವ ಪ್ರಶಸ್ತಿ ಇದಾಗಿದೆ.
ಜಗಳೂರಿನ ಜೆ.ಎಂ. ಇಮಾಂ ಟ್ರಸ್ಟ್ ವತಿಯಿಂದ ಇಮಾಂ ಸ್ಮಾರಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ, ಪ್ರತಿಯೊಬ್ಬರಿಗೂ ಅಕ್ಷರ ಜ್ಞಾನ ಅಗತ್ಯವಾಗಿದ್ದು, ಅಕ್ಷರ ಜ್ಞಾನ ದಿಂದ ನಾನು ವಂಚಿತನಾಗಿದ್ದ ಕಾರಣ ಕಿತ್ತಳೆ ಹಣ್ಣು ಮಾರಾಟ ಮಾಡಿ ಬಂದ ಲಾಭದಲ್ಲಿ 2004ರಲ್ಲಿ ಒಂದು ಶಾಲೆ ಆರಂಭಿಸಿದೆ ಎಂದು ಹೇಳಿದ್ದಾರೆ.
- Advertisement -