Friday, May 17, 2024
Homeಕರಾವಳಿಉಡುಪಿಉಡುಪಿಯ ಆಭರಣ ಮಳಿಗೆಯಲ್ಲಿ ಸೇಲ್ಸ್ ಮ್ಯಾನ್ ಗಮನ ಬೇರೆಡೆ ಸೆಳೆದು ಚಿನ್ನದ ಬಳೆಗಳು ಕಳವು !

ಉಡುಪಿಯ ಆಭರಣ ಮಳಿಗೆಯಲ್ಲಿ ಸೇಲ್ಸ್ ಮ್ಯಾನ್ ಗಮನ ಬೇರೆಡೆ ಸೆಳೆದು ಚಿನ್ನದ ಬಳೆಗಳು ಕಳವು !

spot_img
- Advertisement -
- Advertisement -

ಉಡುಪಿಯ ವಿದ್ಯಾಸಮುದ್ರ ಮಾರ್ಗ ದಲ್ಲಿರುವ ಸುಲ್ತಾನ್ ಡೈಮಂಡ್ಸ್ ಅಂಡ್ ಗೋಲ್ಡ್ ಆಭರಣ ಮಳಿಗೆಗೆ ಆಭರಣವನ್ನು ಖರೀದಿಸುವ ನೆಪದಲ್ಲಿ ಬುರ್ಖಾ ಧರಿಸಿ ಮಹಿಳೆಯರಿಬ್ಬರು ಬಂದಿದ್ದರು.

ಅವರಿಗೆ ಮಳಿಗೆಯ ಸೇಲ್ಸ್ ಮ್ಯಾನ್ ಚಿನ್ನದ ಬಳೆಗಳನ್ನು ತೋರಿಸುತ್ತಿದ್ದರು. ಈ ವೇಳೆ ಮಹಿಳೆಯರಿಬ್ಬರು ಸೇಲ್ಸ್ ಮ್ಯಾನ್ ಗಮನವನ್ನು ಬೇರೆಡೆಗೆ ಸೆಳೆದು, ಬಳೆಗಳನ್ನು ಕದ್ದಿದ್ದಾರೆ.

ಸುಮಾರು 60 ಗ್ರಾಂ ತೂಕದ ಮೂರು ಲಕ್ಷ ಮೌಲ್ಯದ 4 ಚಿನ್ನದ ಬಳೆಗಳನ್ನು ಕದ್ದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.ಸುಲ್ತಾನ್ ಡೈಮಂಡ್ಸ್ ಅಂಡ್ ಗೋಲ್ಡ್ ಆಭರಣ ಮಳಿಗೆಯ ಮ್ಯಾನೇಜರ್ ಕೂಡಲೇ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿಯುತ್ತಿದೆ.

- Advertisement -
spot_img

Latest News

error: Content is protected !!