Thursday, June 4, 2026
Homeಕರಾವಳಿಜೀವನ್ ರಾಂ ಸುಳ್ಯ ಅವರಿಗೆ ಜಾನಪದ ವಿವಿ ಗೌರವ ಡಾಕ್ಟರೇಟ್ ಪದವಿ ಪ್ರದಾನ

ಜೀವನ್ ರಾಂ ಸುಳ್ಯ ಅವರಿಗೆ ಜಾನಪದ ವಿವಿ ಗೌರವ ಡಾಕ್ಟರೇಟ್ ಪದವಿ ಪ್ರದಾನ

- Advertisement -
- Advertisement -

ಹಾವೇರಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 6 ಮತ್ತು 7 ನೇ ಘಟಿಕೋತ್ಸವ ಇಂದು ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವರ್ಚುವಲ್ ಆಗಿ ರಾಜಭವನದಿಂದ ಘಟಿಕೋತ್ಸವಕ್ಕೆ ಚಾಲನೆ ನೀಡಿದರು.

ಶಿಗ್ಗಾಂವ್ ತಾಲೂಕಿನ ಗೊಟಗೊಡಿಯಲ್ಲಿರುವ ಜಾನಪದ ವಿಶ್ವ ವಿದ್ಯಾಲಯದ
ಹಿರೆತಿಟ್ಟು ಬಯಲು ರಂಗ ಮಂದಿರದಲ್ಲಿ ನಡೆದ ಪದವಿ ಪ್ರದಾನ‌ ಕಾರ್ಯಕ್ರಮದಲ್ಲಿ ರಂಗ ಕಲಾವಿದ ಜೀವನ್ ರಾಂ ಸುಳ್ಯ ಸೇರಿದಂತೆ ಆರು ಜನ ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.

ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೊಹನ್ ಆಳ್ವ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮೊದಲು ವಿಶ್ವವಿದ್ಯಾಲಯದಿಂದ ಹಿರೆತಿಟ್ಟು ಸಭಾ ಭವನದವರೆಗೆ ವಿವಿಧ ಜಾನಪದ ಕಲಾ ತಂಡಗಳ ಮರವಣಿಗೆ ಮೂಲಕ ಡಾ. ಮೋಹನ್ ಆಳ್ವ ಸೇರಿದಂತೆ ಗಣ್ಯರನ್ನು ಕರೆ ತರಲಾಯಿತು.

- Advertisement -

Latest News

error: Content is protected !!