Saturday, June 6, 2026
Homeಕರಾವಳಿಮಂಗಳೂರು: ನಗರದಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ಕಾಂಗ್ರೆಸ್‌ ಆಕ್ಷೇಪ: ಶಿವಾಜಿ ಪ್ರತಿಮೆಯ ಬದಲು ಕೋಟಿ-ಚೆನ್ನಯರ ಪ್ರತಿಮೆ...

ಮಂಗಳೂರು: ನಗರದಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ಕಾಂಗ್ರೆಸ್‌ ಆಕ್ಷೇಪ: ಶಿವಾಜಿ ಪ್ರತಿಮೆಯ ಬದಲು ಕೋಟಿ-ಚೆನ್ನಯರ ಪ್ರತಿಮೆ ಸ್ಥಾಪನೆಗೆ ಸಲಹೆ

- Advertisement -
- Advertisement -

ಮಂಗಳೂರು: ನಗರದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಸ್ಥಾಪಿಸುವ ಪ್ರಸ್ತಾವನೆಗೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ಮಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ  ಛತ್ರಪತಿ ಶಿವಾಜಿ ಮರಾಠ ಅಸೋಸಿಯೇಷನ್‌ನ ಬೇಡಿಕೆಯ ಬಗ್ಗೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ.

ಸಭೆಯಲ್ಲಿ ವಿರೋಧ ಪಕ್ಷದ ನಾಯಕ ನವೀನ್ ಡಿಸೋಜಾ ಅವರು ಕರ್ನಾಟಕದ ವಿರುದ್ಧ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಲುವನ್ನು ಎತ್ತಿ ಹಿಡಿದ ಕ್ರಮವನ್ನು ವಿರೋಧಿಸಿದರು. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಶಾಂತಿ ಕದಡಲು ಎಂಇಎಸ್ ಯತ್ನಿಸುತ್ತಿರುವ ಸಂದರ್ಭದಲ್ಲಿ ನಗರದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸುವುದು ಸರಿಯಲ್ಲ ಎಂದರು. ಶಿವಾಜಿ ಪ್ರತಿಮೆಯ ಬದಲು ತುಳುನಾಡಿನ ಅವಳಿ ಯೋಧರಾದ ಕೋಟಿ-ಚೆನ್ನಯರ ಪ್ರತಿಮೆ ಸ್ಥಾಪಿಸಬಹುದು ಎಂದು ಸಲಹೆ ನೀಡಿದರು.

- Advertisement -

Latest News

error: Content is protected !!