Friday, August 28, 2026
Homeಕರಾವಳಿಮಂಗಳೂರುನೆಲ್ಯಾಡಿ; ಕುಂಡಡ್ಕದ ಸರ್ವೀಸ್ ಜೀಪ್ ಚಾಲಕ ಶೇಖರ ಗೌಡ ನಿಧನ

ನೆಲ್ಯಾಡಿ; ಕುಂಡಡ್ಕದ ಸರ್ವೀಸ್ ಜೀಪ್ ಚಾಲಕ ಶೇಖರ ಗೌಡ ನಿಧನ

- Advertisement -
- Advertisement -

ನೆಲ್ಯಾಡಿ; ಕೌಂಡ್ರಾಡಿ ಗ್ರಾಮದ ಕುಂಡಡ್ಕದ ಸರ್ವೀಸ್ ಜೀಪ್ ಚಾಲಕ ಶೇಖರ ಗೌಡ (56) ಹೃದಯಾಘಾತದಿಂದ ಮೇ.2 ಶನಿವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.

ಬೆಳಗ್ಗೆ ಮನೆಯಲ್ಲಿದ್ದ ವೇಲೆ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆದೆ ಕರೆತರಲಾಗಿದೆ. ಆದರೆ ಅಷ್ಟರಲ್ಲಿ ಅವರು ನಿಧನರಾಗಿದ್ದಾರೆ ಎನ್ನಲಾಗಿದೆ.

ಶೇಖರ್ ಗೌಡ ಅವರು ಕಳೆದ ಹಲವು ವರ್ಷಗಳಿಂದ ಶಿರಾಡಿ, ಗುಂಡ್ಯ,ಶಿರಾಡಿ,  ಉಪ್ಪಿನಂಗಡಿ ಭಾಗಗಳಲ್ಲಿ ಸ್ವಂತ ಸರ್ವೀಸ್ ಜೀಪ್ ಓಡಿಸಿ ಎಲ್ಲರಿಗೂ ಪರಿಚಿತರಾಗಿದ್ದರು. ಅಲ್ಲದೇ ಎಲ್ಲರಿಗೂ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಮೃತರು ಪತ್ನಿ ಹಾಗೂಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!