Monday, June 8, 2026
Homeಕರಾವಳಿಉಪ್ಪಿನಂಗಡಿ: ಜೀಪು ಚಲಾಯಿಸಿಕೊಂಡು ಬಂದ ಚಾಲಕ ಜೀಪು ನಿಲ್ಲಿಸುತ್ತಿದ್ದಂತೆ ಹೃದಯಾಘಾತದಿಂದ ನಿಧನ

ಉಪ್ಪಿನಂಗಡಿ: ಜೀಪು ಚಲಾಯಿಸಿಕೊಂಡು ಬಂದ ಚಾಲಕ ಜೀಪು ನಿಲ್ಲಿಸುತ್ತಿದ್ದಂತೆ ಹೃದಯಾಘಾತದಿಂದ ನಿಧನ

- Advertisement -
- Advertisement -

ಉಪ್ಪಿನಂಗಡಿ: ಜೀಪು ಚಲಾಯಿಸಿಕೊಂಡು ಬಂದ ಚಾಲಕ ಜೀಪು ನಿಲ್ಲಿಸುತ್ತಿದ್ದಂತೆ ಹೃದಯಾಘಾತದಿಂದ ನಿಧನವಾಗಿರುವ ಘಟನೆ ಉಪ್ಪಿನಂಗಡಿಯ ಖಾಸಗಿ ನರ್ಸಿಂಗ್‌ ಹೋಂ ಬಳಿ ನಡೆದಿದೆ.

ಕಡಬ ತಾಲೂಕು  ಕೊಯಿಲ ಗ್ರಾಮದ ಒಳಕಡಮ ನಿವಾಸಿ ವಿಶ್ವನಾಥ ಗೌಡ (50) ಅವರು ಮೃತಪಟ್ಟವರು. 

 ವಿಶ್ವನಾಥ ಗೌಡ ತಮ್ಮ ಜೀಪನ್ನು ದುರಸ್ತಿಗೊಳಪಡಿಸಿ ಹೊಸ ಬಣ್ಣ ಬಳಿದು ಅದರ ವಯರಿಂಗ್‌ ಬದಲಾಯಿಸಲು ಗ್ಯಾರೇಜೊಂದರಲ್ಲಿ ಮಾತುಕತೆ ನಡೆಸಿದ್ದರು. ಅನಂತರ ಉಪ್ಪಿನಂಗಡಿಯ ಖಾಸಗಿ ನರ್ಸಿಂಗ್‌ ಹೋಂ ಬಳಿ ಜೀಪನ್ನು ನಿಲ್ಲಿಸುತ್ತಿದ್ದಂತೆಯೇ ಹೃದಯ ಸ್ತಂಭನಕ್ಕೆ ತುತ್ತಾಗಿ ಜೀಪಿನಲ್ಲೇ ಮೃತಪಟ್ಟಿದ್ದಾರೆ.ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

- Advertisement -

Latest News

error: Content is protected !!