Thursday, June 4, 2026
Homeತಾಜಾ ಸುದ್ದಿಎನ್ ಡಿಎ ಭಾಗವಾದ ಜೆಡಿಎಸ್ : ವಿಜಯದಶಮಿ ಬಳಿಕ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ

ಎನ್ ಡಿಎ ಭಾಗವಾದ ಜೆಡಿಎಸ್ : ವಿಜಯದಶಮಿ ಬಳಿಕ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ

- Advertisement -
- Advertisement -

ನವದೆಹಲಿ: ಜಾತ್ಯಾತೀತ ಜನತಾದಳ ಎನ್ ಡಿಎ ಭಾಗವಾಗಿದೆ. ನವದೆಹಲಿಯಲ್ಲಿ ಇಂದು ಬಿಜೆಪಿ ಜೊತೆಗಿನ ಅಂತಿಮ ಮಾತುಕತೆ ಬಳಿಕ ಜೆಡಿಎಸ್ ಎನ್ ಡಿಎಗೆ ಸೇರ್ಪಡೆಯಾಗಿದೆ.

ನವದೆಹಲಿಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ, ಗೋವಾ ಸಿಎಂ ಪ್ರಮೋದ್ ಸಾವಂತ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಪಾಲ್ಗೊಂಡಿದ್ದರು.

ದಸರಾ ಹಬ್ಬದ ಬಳಿಕ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಮಾತುಕತೆ ನಡೆಸಲಿವೆ.

ಸೀಟು ಹಂಚಿಕೆಗೂ ಮುನ್ನ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರ ಜೊತೆಗೆ ಮಾತುಕತೆ ನಡೆಸಲಿದೆ.

- Advertisement -

Latest News

error: Content is protected !!