Sunday, June 7, 2026
Homeತಾಜಾ ಸುದ್ದಿಕುಮಾರಸ್ವಾಮಿಗೆ ಆಮೆ-ಮೊಲದ ಕಥೆ ಹೇಳಿದ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ

ಕುಮಾರಸ್ವಾಮಿಗೆ ಆಮೆ-ಮೊಲದ ಕಥೆ ಹೇಳಿದ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ

- Advertisement -
- Advertisement -

ಮಂಡ್ಯ: ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರು, ಮಾಜಿ ಸಿಎಂ ಕುಮಾರಸ್ವಾಮಿಗೆ ಆಮೆ-ಮೊಲದ ಕಥೆಯನ್ನು ಹೇಳುವ ಮೂಲಕ ಜೆಡಿಎಸ್‍ಗೆ ಕೇಡುಗಾಲ ಬಂದಿತ್ತು ಎಂದು ತಿರುಗೇಟು ಕೊಟ್ಟರು.

ಈ ಸಂದರ್ಭದಲ್ಲಿ ಕೆ.ಆರ್.ಪೇಟೆ ಉಪಚುನಾವಣೆ ಘಟನೆ ನೆನೆದ ಅವರು, ನಾರಾಯಣಗೌಡ ಜಾಗದಲ್ಲಿ ನಾನು ಇದ್ದಿದ್ದರು ನಾನು ರಾಜೀನಾಮೆ ಕೊಡುತ್ತಿರಲಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇಟ್ಟು ರಾಜೀನಾಮೆ ಕೊಟ್ಟು ನಮ್ಮ ಪಕ್ಷಕ್ಕೆ ಬಂದರು. ಅವರನ್ನು ಗೆಲ್ಲಿಸಬೇಕೆಂದು ನಾವು ಹಗಲಿರುಳು ಶ್ರಮಪಟ್ಟೆವು. ಯಡಿಯೂರಪ್ಪ ಅವರು ಒಂದೇ ದಿನ ಎರಡು ಕಡೆ ಪ್ರಚಾರ ಸಭೆ ನಡೆಸಿದ್ರು. ಮತದಾನಕ್ಕೆ ಮೂರ್ನಾಲ್ಕು ದಿನಗಳ ಬಾಕಿ ಇರುವಾಗ ಯಾಕೋ ಸ್ವಲ್ಪ ಕಷ್ಟ ಇದೆ, ಸೋಲುತ್ತೇವೆ ಎನ್ನಿಸುತ್ತೆ ಎಂದು ನಾರಾಯಣಗೌಡ ಅವರಿಗೆ ಕೇಳಿದೆ. ಆದ್ರು ಪರವಾಗಿಲ್ಲ ನಾವು ನಮ್ಮ ಶ್ರಮ ಹಾಕೋಣಾ ಎಂದರು. ಆ ವೇಳೆ ಎಲ್ಲರೂ ಬಿಜೆಪಿ ಎಲ್ಲಿ ಗೆಲ್ಲುತ್ತೇ, ನಾವು ಎಷ್ಟು ಉಪಚುನಾವಣೆ ಮಾಡಿಲ್ಲ ಎಂದಿದ್ದರು ಎಂದು ತಿಳಿಸಿದರು

ಆದಾಗಲೇ ಜೆಡಿಎಸ್‍ಗೆ ಆಗ ಕೇಡುಗಾಲ ಬಂದಿತ್ತು. ಕೊನೆದಿನದ ಪ್ರಚಾರಕ್ಕೆ ಬರಬೇಕಿದ್ದ ಮಾಜಿ ಸಿಎಂ ಕುಮಾರಸ್ವಾಮಿಗೆ ಹೆಲಿಕಾಪ್ಟರ್ ಕೈ ಕೊಟ್ಟಿತ್ತು. ಅವತ್ತು ಜೆಡಿಎಸ್‍ನ ವಿಶ್ವಾಸ ನೋಡಿದ್ರೆ, ನಂಗೆ ಮೊಲ, ಆಮೆಯ ಕಥೆ ನೆನಪಾಗುತ್ತೆ ಎಂದು ವ್ಯಂಗ್ಯವಾಡಿದರು. ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಮೊಲ ಆಗಿತ್ತು, ನಾವು ಆಮೆಯಾಗಿದ್ದೋ. ಆಮೆ ರೇಸ್‍ನಲ್ಲಿ ಮುಂದೆ ಹೋದ್ರೆ, ಮೊಲ ನಿದ್ದೆ ಮಾಡ್ತಾ ಇತ್ತು ಎಂದು ವಿವರಿಸಿದರು.

ನಮ್ಮ ಪಕ್ಷದವರು ಆಮೆಯಂತೆ ನಮ್ಮ ಆತ್ಮವಿಶ್ವಾಸ ಬಿಡದೇ ಕೆಲಸ ಮಾಡಿದೆವು. ಮೊದಲ ರೌಂಡ್ ಬಿಟ್ಟರೇ ಉಳಿದ ಎಲ್ಲ ರೌಂಡ್‍ಗಳಲ್ಲೂ ನಮ್ಮ ಅಭ್ಯರ್ಥಿ ಮುನ್ನಡೆ ಸಾಧಿಸಿದರು. ಜೆಡಿಎಸ್‍ನವರು ಮಲಗಿ ಮೇಲೆ ಎದ್ದಿದ್ದು, ಫಲಿತಾಂಶ ಬಂದ ಮೇಲೆ. ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆದ್ದಾಗ ಯಡಿಯೂರಪ್ಪ ಅವರು ತುಂಬಾ ಖುಷಿ ಪಟ್ಟರು. ಇಡೀ ರಾಜ್ಯವನ್ನೆ ಗೆದ್ದಷ್ಟು ಖುಷಿ ಅವರ ಮುಖದಲ್ಲಿ ಕಾಣುತ್ತಿತ್ತು ಎಂದು ಸಂತೋಷ ವ್ಯಕ್ತಪಡಿಸಿದರು. ಈಗ ಆ ಶ್ರಮದ ಫಲ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆದ್ದಿದೆ. ಕೆಆರ್‌ಪೇಟೆಯಲ್ಲಿ ಆರಂಭವಾಗಿರುವ ವಿಜಯಯಾತ್ರೆ ಮಂಡ್ಯದ ಎಲ್ಲ ಕ್ಷೇತ್ರದಲ್ಲೂ ಆರಂಭವಾಗಬೇಕು ಎಂದು ಹೇಳಿದರು.

- Advertisement -

Latest News

error: Content is protected !!