Wednesday, June 24, 2026
Homeತಾಜಾ ಸುದ್ದಿ777 ಚಾರ್ಲಿಯನ್ನು ಮೆಚ್ಚಿಕೊಂಡ ನಟಿ ರಮ್ಯಾ: ಮೋಹಕತಾರೆಯ ಟ್ವೀಟ್‌ ನೋಡಿ ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

777 ಚಾರ್ಲಿಯನ್ನು ಮೆಚ್ಚಿಕೊಂಡ ನಟಿ ರಮ್ಯಾ: ಮೋಹಕತಾರೆಯ ಟ್ವೀಟ್‌ ನೋಡಿ ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

- Advertisement -
- Advertisement -

ಮೋಹಕ ತಾರೆ ರಮ್ಯಾ ಅವರು ಸದ್ಯ ಚಿತ್ರಂಗದಿಂದ ದೂರವಿದ್ದಾರೆ. ಆದರೂ ಕೆಲ ದಿನಗಳಿಂದ ರಮ್ಯಾ ಅವರು ಕನ್ನಡದ ಚಿತ್ರಗಳ ಕುರಿತು ಟ್ವೀಟ್ ಮಾಡುವುದು, ಮಾತನಾಡುವ ಮೂಲಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಸೂಚನೆ ನೀಡುತ್ತಿದ್ದಾರೆ. ಇದರ ನಡುವೆ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘777 ಚಾರ್ಲಿ‘ (777 Charlie) ಚಿತ್ರ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಚಿತ್ರವು ಇದೇ ಜೂನ್ 10ರಂದು ರಿಲೀಸ್ ಆಗಲಿದೆ. ಆದರೆ ಇದಕ್ಕೂ ಮುನ್ನ ರಕ್ಷಿತ್ ಶೆಟ್ಟಿ ನಿನ್ನೆ ಒರಾಯನ್ ಮಾಲ್​ನಲ್ಲಿ ಆಪ್ತರಿಗೆ ಸ್ಪೆಷಲ್ ಶೋ ಏರ್ಪಡಿಸಿದ್ದರು. ಆ ಶೋನಲ್ಲಿ ರಮ್ಯಾ ಅವರು ಸಿನಿಮಾ ನೋಡಿ‌ ಮೆಚ್ಚಿಕೊಂಡಿದ್ದಾರೆ. ಅದಲ್ಲದೇ ರಮ್ಯಾ ಚಾರ್ಲಿ ಕುರಿತು ಮೆಚ್ಚಿಕೊಂಡು ಟ್ವೀಟ್​ ಮಾಡಿಕೊಂಡಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಇನ್ನು, 777 ಚಾರ್ಲಿ ಚಿತ್ರತಂಡವು ವಿಶೇಷವಾಗಿ ಸ್ಪೆಷಲ್ ಶೋ ಏರ್ಪಡಿಸಿದ್ದರು. ಆ ಶೋನಲ್ಲಿ ರಮ್ಯಾ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. ಈ ಶೋ ಮುಗಿದ ಬಳಿಕ ಎಲ್ಲರೂ ಚಿತ್ರದ ಕುರಿತು ಮೆಚ್ಚುಗೆಯ ಮಾತನಾಡಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದೆ. ರಮ್ಯಾ ಸಹ ಸಿನಿಮಾವನ್ನು ಮೆಚ್ಚಿಕೊಂಡಿದ್ದು, ಈ ಕುರಿತು ಟ್ವೀಟ್ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಟ್ವೀಟ್​ ಅನ್ನು ರೀ ಟ್ವೀಟ್ ಮಾಡಿರುವ ರಮ್ಯಾ, ‘777 ಚಾರ್ಲಿ ಒಂದು ಭಾವನಾತ್ಮಕ ಸಿನಿಮಾವಾಗಿದ್ದು, ಪ್ರೀತಿಯ ಮಹತ್ವ ಸಾರುವ ಸೊಗಸಾದ ಸಿನಿಮಾವಾಗಿದೆ. ನಾವು ಅಳವಡಿಸಿಕೊಳ್ಳಬೇಕಾದ ಉತ್ಕೃಷ್ಟ ಪ್ರೀತಿಯನ್ನು ಮನುಷ್ಯರಿಗೆ ಕಲಿಸುತ್ತದೆ. ಈ ಬೆಚ್ಚಗಿನ ಹೃದಯದ ಕಣ್ಣೀರಿಗಾಗಿ ರಕ್ಷಿತ್ ಮತ್ತು ಕಿರಣ್ ರಾಜ್ ಗೆ ಧನ್ಯವಾದಗಳು‘ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

- Advertisement -

Latest News

error: Content is protected !!