Wednesday, June 24, 2026
Homeಅಪರಾಧಡ್ರಾಪ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ; ಕಾಮುಕನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಯುವತಿಯ...

ಡ್ರಾಪ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ; ಕಾಮುಕನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಯುವತಿಯ ಮನವಿ

- Advertisement -
- Advertisement -

ಮೂಡಿಗೆರೆ : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ವಿದ್ಯಾರ್ಥಿನಿಯು ಕಾಲೇಜಿನಿಂದ ತರಗತಿಯನ್ನು ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಅದೇ ಊರಿನ ಪಕ್ಕದ ಗ್ರಾಮಸ್ಥನೋರ್ವ ವಿದ್ಯಾರ್ಥಿನಿಯನ್ನ ಬಲಾತ್ಕಾರ ಮಾಡಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ದೇವರಾಜ್ ಎಂಬಾತ ಆರೋಪಿ. ದೇವರಾಜ್ ವಿದ್ಯಾರ್ಥಿನಿಯಲ್ಲಿ ನಿನ್ನನ್ನು ಊರಿಗೆ ಬಿಟ್ಟು ಹೋಗುತ್ತೇನೆಂದು ಹೇಳಿ, ಬೈಕಿನಲ್ಲಿ ಕುಳಿತ ಬಳಿಕ ಅವಾಚ್ಯವರ್ತನೆ ಮಾಡಿದ್ದಾನೆಂದು ಯುವತಿಯು ಆರೋಪಿಸಿದ್ದಾಳೆ. 

ಈ ವರ್ತನೆಯನ್ನು ಕಂಡು ಆಕೆಯು ಬೈಕಿನಿಂದ ಇಳಿಯಲು ಪ್ರಯತ್ನಿಸಿದಾಗ ಮೈಮೇಲೆ ಕೈಹಾಕಿ ಬಲಾತ್ಕಾರ ನಡೆಸಲು ಯತ್ನಿಸಿದ್ದಾನೆ ಹಾಗೂ ಈ ವಿಷಯವನ್ನು ಯಾರಿಗಾದರೂ ಹೇಳಿದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಆರೋಪಿಸಿ ಯುವತಿಯು ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ. ಈ ಕುರಿತು ಆರೋಪಿಯ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿದ್ದಾಳೆ.

ಈಗಾಗಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. ಕಾಮುಕನಿಗೆ ಶಿಕ್ಷೆಯಾಗಬೇಕೆಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಅಧಿಕಾರಿಗಳನ್ನು ಕೋರಿದ್ದಾರೆ.

- Advertisement -

Latest News

error: Content is protected !!