Friday, June 5, 2026
Homeತಾಜಾ ಸುದ್ದಿಸಿದ್ದರಾಮಯ್ಯ ಭೇಟಿ ಮಾಡಿದ ಜೆಡಿಎಸ್ ನಿಯೋಗ: ಕುತೂಹಲಕ್ಕೆ ಕಾರಣವಾದ ಮಾತುಕತೆ

ಸಿದ್ದರಾಮಯ್ಯ ಭೇಟಿ ಮಾಡಿದ ಜೆಡಿಎಸ್ ನಿಯೋಗ: ಕುತೂಹಲಕ್ಕೆ ಕಾರಣವಾದ ಮಾತುಕತೆ

- Advertisement -
- Advertisement -

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ರಾಜ್ಯಸಭೆ ಚುನಾವಣೆಯ ಭರಾಟೆ ದಿನೇ ದಿನೇ ಬಿರುಸು ಪಡೆದುಕೊಂಡಿದೆ. ಜೆಡಿಎಸ್​ ತನ್ನದೇ ರೀತಿಯಲ್ಲಿ ರಣತಂತ್ರ ರೂಪಿಸಿದೆ. ಇಂದು ಜೆಡಿಎಸ್ ನಿಯೋಗ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿತು.

ಟಿಎ ಶರವಣ ಹಾಗೂ ಬಿಎಂ ಫಾರೂಖ್ ನೇತೃತ್ವದ ನಿಯೋಗ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಬೆಂಬಲಿಸುವಂತೆ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದರು. ಭೇಟಿ ಬಳಿಕ ಮಾತನಾಡಿದ ಜೆಡಿಎಸ್​ ಮುಖಂಡ ಟಿಎ ಶರವಣ, ನಾವು ಹಾಗೂ ಕಾಂಗ್ರೆಸ್ ಕೋಮುವಾದಿ ಪಕ್ಷ ಅಧಿಕಾರದಿಂದ ದೂರ ಇಡಬೇಕು ಎಂಬ ಚಿಂತನೆ ಇಟ್ಟುಕೊಂಡಿದೆ. ಇನ್ನೂ ನಾಮಪತ್ರ ವಾಪಾಸ್ ತೆಗೆದುಕೊಳ್ಳಲು ಎರಡು ದಿನ ಇದೆ. ಸಿದ್ದರಾಮಯ್ಯನವರು ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ ಎಂದರು.

- Advertisement -

Latest News

error: Content is protected !!