Tuesday, July 14, 2026
Homeಕರಾವಳಿಮಂಗಳೂರು; ಹರೇಕಳದಿಂದ ನಾಪತ್ತೆಯಾದ ಯುವಕ ಬಳ್ಳಾರಿಯಲ್ಲಿ ಪತ್ತೆ

ಮಂಗಳೂರು; ಹರೇಕಳದಿಂದ ನಾಪತ್ತೆಯಾದ ಯುವಕ ಬಳ್ಳಾರಿಯಲ್ಲಿ ಪತ್ತೆ

- Advertisement -
- Advertisement -

ಮಂಗಳೂರು; ಹರೇಕಳದಿಂದ ನಾಪತ್ತೆಯಾದ ಯುವಕ ಜಯರಾಜ್(34) ಬಳ್ಳಾರಿಯಲ್ಲಿ ಪತ್ತೆಯಾಗಿದ್ದಾರೆ. ಮೇ.30 ರಂದು ಗರ್ಭಿಣಿ ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟು ಬಲ್ಮಠದಲ್ಲಿನ ಸ್ಕ್ಯಾನಿಂಗ್ ಸೆಂಟರ್ ನ ಕೆಲಸಕ್ಕೆ ತೆರಳಿದ್ದ ಜಯರಾಜ್, ಅಲ್ಲಿ ಎಟೆಂಡೆನ್ಸ್ ಹಾಕಿ ನಂತರ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ನಿಗೂಢವಾಗಿ ನಾಪತ್ತೆಯಾಗಿದ್ದರು.

ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆಮಂದಿ ನಾಪತ್ತೆ ದೂರು ದಾಖಲಿಸಿದ್ದರು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ರಾಜ್ಯದಾದ್ಯಂತ ಪೊಲೀಸ್ ಇಲಾಖೆಗಳಿಗೆ ಮಾಹಿತಿ ರವಾನಿಸಿದ್ದು, ಮಂಗಳೂರು ವ್ಯಾಪ್ತಿಯಲ್ಲಿ ಹುಡುಕಾಟ ಆರಂಭಿಸಿದ್ದರು.

ಸ್ನೇಹಿತರನ್ನು ವಿಚಾರಣೆಗೆ ಕರೆಸಲಾಗಿತ್ತು. ಈ ಮಧ್ಯೆ ಮೇ.31 ರಂದು ಪಡೀಲ್- ನಂತೂರು ರಸ್ತೆ ಬಳಿ ಜಯರಾಜ್ ಉಪಯೋಗಿಸುವ ಸ್ಕೂಟರ್ ಪತ್ತೆಯಾಗಿತ್ತು. ಅದರಲ್ಲಿ ಮೊಬೈಲ್, ಪರ್ಸ್, ದಾಖಲೆಗಳೆಲ್ಲವೂ ಪತ್ತೆಯಾಗಿತ್ತು. ಇದರಿಂದ ಮನೆಮಂದಿ ಇನ್ನಷ್ಟು ಚಿಂತೆಗೀಡಾಗಿದ್ದರು.

ಇಂದು ಮಧ್ಯಾಹ್ನ ವೇಳೆ ಬಳ್ಳಾರಿ ಪೊಲೀಸರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಯನ್ನು ಸಂಪರ್ಕಿಸಿ ಜಯರಾಜ್ ಬಳ್ಳಾರಿಯಲ್ಲಿದ್ದು, ಅಲ್ಲಿಗೆ ಬಂದು ಕರೆದೊಯ್ಯಲು ತಿಳಿಸಿದ್ದಾರೆ. ಸಂಬಂಧಿಕರು ಹಾಗೂ ಪೊಲೀಸರು ಬಳ್ಳಾರಿಗೆ ಹೊರಟಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!