Tuesday, June 23, 2026
Homeಕರಾವಳಿಮಂಗಳೂರುಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ ಜಯಂತ್.ಟಿ

ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ ಜಯಂತ್.ಟಿ

- Advertisement -
- Advertisement -

ಬೆಳ್ತಂಗಡಿ: ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಆರೋಪ ಕೇಳಿ ಬಂದಿರುವ ಜಯಂತ್ ‌ಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಡಿ.12 ರಂದು ಆಗಮಿಸಿದ್ದಾರೆ.

ಬೆಳ್ತಂಗಡಿ ನ್ಯಾಯಾಲಯದಿಂದ 22-12-1986 ರಂದು ನಡೆದ ಪದ್ಮಲತಾ ಕೊಲೆ ಪ್ರಕರಣದ ಬಗ್ಗೆ ಎಸ್ಐಟಿಗೆ ದೂರು ನೀಡಲಾಗಿದ್ದು,  ಅದರ ದಾಖಲೆಗಳನ್ನು ತೆಗೆಯಲು ಪದ್ಮಲತಾ ಸಹೋದರಿ ಜೊತೆ ಆಗಮಿಸಿದ್ದು‌,  ದಾಖಲೆಗಳನ್ನು ಎಸ್ಐಟಿ ಅಧಿಕಾರಿಗಳಿಗೆ ನೀಡಿ ತನಿಖೆ ಮಾಡಲು ಅನುಕೂಲವಾಗಲಿದೆ ಎಂದು ನ್ಯಾಯಾಲಯಕ್ಕೆ ಆಗಮಿಸಿರುವುದಾಗಿ ಜಯಂತ್‌ ಟಿ ಹೇಳಿಕೆ ನೀಡಿದ್ದಾರೆ.

ಬುರುಡೆ ಷಡ್ಯಂತ್ರ ಪ್ರಕರಣದ ಬಗ್ಗೆ ವರದಿಯ ಪ್ರತಿ ನನಗೆ ಇನ್ನೂ ಲಭಿಸಿಲ್ಲ. ವರದಿ ಬಂದ ಬಳಿಕ ಏನೂ ಇದೆ ಎಂದು ಗೊತ್ತಾಗಲಿದೆ. ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಬಗ್ಗೆ ನಂಬಿಕೆ ಇದೆ ಎಂದರು.

- Advertisement -

Latest News

error: Content is protected !!