- Advertisement -
![]()
- Advertisement -
ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಭಾರತೀಬೈಲು, ಬಿ.ಹೊಸಳ್ಳಿ ಗ್ರಾಮದಲ್ಲಿ ಹುಲಿಯೊಂದು ಆತಂಕ ಸೃಷ್ಟಿಸಿದೆ.
ಹಸುಗಳ ಮೇಲೆ ನಿರಂತರ ದಾಳಿ ಬೆನ್ನಲ್ಲೇ ಅರಣ್ಯ ಇಲಾಖೆ ಕ್ಯಾಮರಾ ಅಳವಡಿಸಿತ್ತು. ಇದೀಗ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮರಾದಲ್ಲಿ ಹುಲಿಯ ಓಡಾಟ ಸೆರೆಯಾಗಿದೆ. ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಹುಲಿ ಸಂಚರಿಸುತ್ತಿರೋದು ಖಚಿತವಾಗಿದೆ.
ಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ 212 ರಲ್ಲಿ ರಾಸುಗಳ ಮೇಲೆ ಹುಲಿ ದಾಳಿ ಮಾಡಿತ್ತು. ಭಾರತೀಬೈಲು ಗ್ರಾಮದ ಸಮೀಪ ಅರಣ್ಯದಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಹುಲಿ ಸೆರೆಯಾಗಿದೆ. ಕ್ಯಾಮರಾದಲ್ಲಿ ಹುಲಿ ಸೆರೆ ಬೆನ್ನಲ್ಲೇ ಹತ್ತಾರು ಹಳ್ಳಿಯಲ್ಲಿ ಆತಂಕ ಹೆಚ್ಚಿದೆ.
- Advertisement -


