Saturday, April 20, 2024
Homeಇತರಜಮ್ಮು ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ; ಆಜಾನ್ ವಿರೋಧಿಸಿ ಪ್ರತಿಭಟನೆ

ಜಮ್ಮು ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ; ಆಜಾನ್ ವಿರೋಧಿಸಿ ಪ್ರತಿಭಟನೆ

spot_img
- Advertisement -
- Advertisement -

ಶ್ರೀನಗರ: ಜಮ್ಮುವಿನ ಸ್ಥಳೀಯ ಮಸೀದಿಗಳಲ್ಲಿ ಧ್ವನಿವರ್ದಕಗಳ ಮೂಲಕ ಆಜಾನ್ ಕೂಗುವುದನ್ನು ವಿರೋಧಿಸಿ ಅಲ್ಲಿನ ಸರ್ಕಾರಿ ಕಾಲೇಜಿನ ವಿ‌ದ್ಯಾರ್ಥಿಗಳು ಹನುಮಾನ್ ಚಾಲೀಸಾ ಪಠಿಸಿದ್ದಾರೆ. 

ಇಲ್ಲಿನ ಗಾಂಧಿ ಮೆಮೋರಿಯಲ್ ಕಾಲೇಜಿನ ಕೆಲ ವಿದ್ಯಾರ್ಥಿಗಳು ಹನುಮಾನ್ ಚಾಲೀಸಾ ಪಠಿಸಿದ್ದು, ಬಳಿಕ ಕೆಲ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ವಿದ್ಯಾರ್ಥಿಗಳ ಕಲಿಕೆಗೆ ಮಸೀದಿಯ ಧ್ವನಿವರ್ಧಕದ ಸದ್ದು ಅಡಚಣೆ ಮಾಡುತ್ತಿದೆ ಎಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದರು ಎಂದು ತಿಳಿಸಿದ್ದಾರೆ.

ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಕೆ ಮತ್ತು ಅದನ್ನು ತಡೆಯುವಲ್ಲಿ ಸ್ಥಳೀಯಾಡಳಿತ ವಿಫಲವಾಗಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಹನುಮಾನ್ ಚಾಲೀಸಾ ಪಠಿಸಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಿಜೆಪಿ ಕೌನ್ಸಿಲತ್ ನರೋತ್ತಮ್ ಶರ್ಮಾ ಅವರು ಜಮ್ಮು ಮುನ್ಸಿಪಲ್ ಕಾರ್ಪೊರೇಷನ್ (ಜೆಎಂಸಿ) ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆಗೆದುಹಾಕುವ ನಿರ್ಧಾರದ ಕುರಿತು ನಿರ್ಣಯಕವನ್ನು ಮಂಡಿಸಿದ್ದರು. ಈ ನಿರ್ಧಾರ ಪ್ರಕಟಿಸಿದ ಕೆಲ ದಿನಗಳ ನಂತರ ಘಟನೆ ನಡೆದಿದೆ.

ಶಬ್ಧ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಮ್ಮುವಿನ ಧಾರ್ಮಿಕ ಮತ್ತು ಸಾರ್ವಜನಿಕ  ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಲಾಗಿತ್ತು. ಬಹುಮತದಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. 

- Advertisement -
spot_img

Latest News

error: Content is protected !!