Tuesday, April 30, 2024
Homeಕರಾವಳಿಮಂಗಳೂರು : ಸುರತ್ಕಲ್‌ನಲ್ಲಿ ಜಲೀಲ್ ಹತ್ಯೆ ಪ್ರಕರಣ: ಮೂವರನ್ನು ಬಂಧಿಸಿದ ಸುರತ್ಕಲ್ ಪೊಲೀಸರು

ಮಂಗಳೂರು : ಸುರತ್ಕಲ್‌ನಲ್ಲಿ ಜಲೀಲ್ ಹತ್ಯೆ ಪ್ರಕರಣ: ಮೂವರನ್ನು ಬಂಧಿಸಿದ ಸುರತ್ಕಲ್ ಪೊಲೀಸರು

spot_img
- Advertisement -
- Advertisement -

ಮಂಗಳೂರು : ದುಷ್ಕರ್ಮಿಗಳ ತಂಡ ಅಂಗಡಿ ಮಾಲೀಕನಿಗೆ ಚೂರಿ ಇರಿದು ಪರಾರಿಯಾಗಿರುವ ಘಟನೆ ಡಿ.24 ರಂದು ಸಂಜೆ ನಡೆದಿತ್ತು, ಚಿಕಿತ್ಸೆ ಫಲಿಸದೆ ಜಲೀಲ್ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದನು. ಕೊಲೆ ಪ್ರಕರಣ ಸಂಬಂಧ ಇಬ್ಬರು ಕೊಲೆ ಮಾಡಿದವರನ್ನು ಸೇರಿ ಬೈಕ್ ನಲ್ಲಿ ಡ್ರಾಪ್ ನೀಡಿದ ಓರ್ವ ಸಹಿತ ಮೂವರನ್ನು ಬಂಧಿಸಲಾಗಿದ್ದು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು 14 ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು. ಆರೋಪಿಗಳಲ್ಲಿ ಇಬ್ಬರು ರೌಡಿ ಶೀಟರ್ ಗಳಾಗಿದ್ದು ಅವರ ಗುರುತು ಪತ್ತೆ ಬಳಿಕ ಎಲ್ಲಾ ವಿವರ ನೀಡಲಾಗುವುದು, ಮಹಿಳೆಯರು ಸೇರಿದಂತೆ 10-12 ಜನರನ್ನು ವಿಚಾರಣೆ ನಡೆಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.

ಮಂಗಳೂರು ಕೃಷ್ಣಪುರ ನಾಲ್ಕನೇ ಬ್ಲಾಕ್ ನಿವಾಸಿ ಅಂಗಡಿ ಮಾಲೀಕ ಜಲೀಲ್(57) ಎಂಬಾತನ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚೂರಿಯಿಂದ ಎದೆಭಾಗಕ್ಕೆ ಇರಿಯಲಾಗಿದ್ದು , ತಕ್ಷಣ ಸ್ಥಳೀಯರು ಶ್ರೀ‌ನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೆ ಜಲೀಲ್ ಸಾವನ್ನಪ್ಪಿದ್ದು ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಕೊಲೆಯಲ್ಲಿ ಭಾಗಿಯಾದ ಮೂವರ ವಿವರ?: ಜಲೀಲ್ ಕೊಲೆ ಪ್ರಕರಣ ಸಂಬಂಧ 2021 ರಲ್ಲಿ ನಡೆದ ಸುರತ್ಕಲ್ ನಲ್ಲಿ ನಡೆದ ರೌಡಿಶೀಟರ್ ಪಿಂಕಿ ನವಾಜ್ ಕೊಲೆ ಯತ್ನ ಪ್ರಕರಣದ ಆರೋಪಿಗಳಲ್ಲಿ ಇಬ್ಬರಾದ ಜಲೀಲ್ ನನ್ನು ನೇರವಾಗಿ ಚೂರಿ ಇರಿದು ಕೊಲೆ ಮಾಡಿದ ಆರೋಪಿಗಳಾದ ಕೃಷ್ಣಾಪುರದ ನೈತಂಗಡಿ ನಿವಾಸಿ ಸುರತ್ಕಲ್ ಎರಡು ಪ್ರಕರಣದ ರೌಡಿಶೀಟರ್ ಶೈಲೇಶ್ ಪೂಜಾರಿ@ ಶೈಲು(21) ಮತ್ತು ಉಡುಪಿ ಜಿಲ್ಲೆಯ ಯೆಜಮಾಡಿ ಎನ್.ಎಸ್ ರೋಡ್ ನಿವಾಸಿ ನಾಲ್ಕು ಪ್ರಕರಣದ ರೌಡಿಶೀಟರ್ ಸುವಿನ್ ಕಾಂಚನ್ @ ಮುನ್ನ(24) ಹಾಗೂ ಬೈಕ್ ನಲ್ಲಿ ಇಬ್ಬರು ಆರೋಪಿಗಳಿಗೆ ಡ್ರಾಪ್ ನೀಡಲು ಸಹಕರಿಸಿದ ಒಬ್ಬನಾದ ಆರೋಪಿ ಕಾಟಿಪ್ಪಳ ಮೂರನೇ ಬ್ಲಾಕ್ ನಿವಾಸಿ ಪಚ್ಚು@ಪವನ್ (23)ನನ್ನು ಬಂಧಿಸಲಾಗಿದ್ದು ಈ ಮೂವರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅವರನ್ನು 14 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

- Advertisement -
spot_img

Latest News

error: Content is protected !!