Friday, June 5, 2026
Homeಕರಾವಳಿಉಡುಪಿಕಾರ್ಕಳ: ಜೈನರ ಆರಾದ್ಯದೇವ ಭಗವಾನ್ ಬಾಹುಬಲಿ ಸ್ವಾಮಿಯ ಅವಹೇಳನ ಹೇಳಿಕೆ ನೀಡಿರುವುದು ಖಂಡನೀಯ: ಮಹಾವೀರ ಹೆಗ್ಡೆ

ಕಾರ್ಕಳ: ಜೈನರ ಆರಾದ್ಯದೇವ ಭಗವಾನ್ ಬಾಹುಬಲಿ ಸ್ವಾಮಿಯ ಅವಹೇಳನ ಹೇಳಿಕೆ ನೀಡಿರುವುದು ಖಂಡನೀಯ: ಮಹಾವೀರ ಹೆಗ್ಡೆ

- Advertisement -
- Advertisement -

ಕಾರ್ಕಳ: ಜೈನರ ಆರಾದ್ಯದೇವ ಭಗವಾನ್ ಬಾಹುಬಲಿ ಸ್ವಾಮಿಯ ಅವಹೇಳನ ಹೇಳಿಕೆಗೆ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಖಂಡನೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡ ಅಯೂಬ್ ಖಾನ್ ತನ್ನ ಧರ್ಮವನ್ನು ಸಮರ್ಥಿಸುವ ಹಾಗೂ ಬಿಜೆಪಿ ಟೀಕಿಸುವ ಭರದಲ್ಲಿ ಬಾಹುಬಲಿ ಸ್ವಾಮಿಯನ್ನು ನಿಂದಿಸಿರುವುದು ದುರಾದೃಷ್ಟಕರವಾಗಿದೆ.

ಜೈನರ ಆರಾಧ್ಯ ದೇವರ ಅವಮಾನಿಸುವ ಮೂಲಕ ಕಾಂಗ್ರೆಸ್ಸಿನ ಇನ್ನೊಂದು ಮುಖವಾಡ ಕಳಚಿಬಿದ್ದಿದೆ. ಟಿಪ್ಪು ಸುಲ್ತಾನ್ ದಿನಾಚರಣೆ, ಹಿಜಾಬ್ ಪ್ರಕರಣವನ್ನು ವೈಭವೀಕರಿಸಿ ಭಗವಾನ್ ಬಾಹುಬಲಿ ಸ್ವಾಮಿಗೆ ಚಡ್ಡಿ ಹಾಕಿ ಅನ್ನುವ ಮೂಲಕ ಸಮಸ್ತ ಜನರ ಭಾವನೆಗಳಿಗೆ ಘಾಸಿ ಮಾಡಿದ್ದಾರೆ. ಅಹಿಂಸಾ ಪರಮಧರ್ಮ, ತತ್ವವನ್ನು ಪಾಲಿಸಿ ಸಮಾಜಮುಖಿ ಕೆಲಸ ಮಾಡುವ ಜೈನ ಸಮುದಾಯದ ಅವಹೇಳನ ಕಾಂಗ್ರೆಸ್ಸಿಗೆ ಶೋಭೆ ತರುವುದಿಲ್ಲ. ಕಾಂಗ್ರೆಸ್‌ನ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಆ ಪಕ್ಷವು ಶೋಚನೀಯ ಸ್ಥಿತಿ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ.

ದೇಶದ ಸಂಸ್ಕೃತಿಯನ್ನು ಉಳಿಸುವ, ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡುವ ಪಕ್ಷಕ್ಕೆ ಮುಂದಿನ ದಿನದಲ್ಲಿ ಸಮಸ್ತ ಹಿಂದು ಹಾಗೂ ಜೈನ ಬಾಂಧವರಿಗೆ ಆಶಾದಾಯಕವಾಗಲಿದೆ. ಹಾಗೂ ಕಾಂಗ್ರೆಸ್‌ನ್ನು ಬೆಂಬಲಿಸುವವರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಕಾಲ ಪಕ್ವವಾಗಿದೆ ಎಂದು ಮಹಾವೀರ್ ಹೆಗ್ಡೆ ಉಲ್ಲೇಖಿಸಿದ್ದಾರೆ.

- Advertisement -

Latest News

error: Content is protected !!