Saturday, June 6, 2026
Homeಕರಾವಳಿತುಳು ಭಾಷೆಯನ್ನು 8ನೇ ಪರಿಚ್ಛೇಧದಲ್ಲಿ ಸೇರಿಸಲಾಗದೆ ಬಂಡಲ್ ಬಿಟ್ಟ ಕರಾವಳಿ ರಾಜಕಾರಣಿಗಳು- ಕೇಮಾರು ಶ್ರೀ

ತುಳು ಭಾಷೆಯನ್ನು 8ನೇ ಪರಿಚ್ಛೇಧದಲ್ಲಿ ಸೇರಿಸಲಾಗದೆ ಬಂಡಲ್ ಬಿಟ್ಟ ಕರಾವಳಿ ರಾಜಕಾರಣಿಗಳು- ಕೇಮಾರು ಶ್ರೀ

- Advertisement -
- Advertisement -

ಮೂಡಬಿದ್ರಿ :ತುಳುನಾಡಿನ ಜನರಿಗೆ ಜಾತಿಗಿಂತ ತುಳು ಸಂಸ್ಕೃತಿ ಮುಖ್ಯ, ದೇಶ ವಿದೇಶಕ್ಕೂ ಹೋದರೂ ತುಳು ಸಂಸ್ಕೃತಿಯನ್ನು ಮರೆಯಬಾರದು. ಆದರೆ ತುಳು ಭಾಷೆಯನ್ನು ಎಂಟನೇ ಪರೀಚ್ಛೇಧದಲ್ಲಿ ಸೇರಿಸುವಲ್ಲಿ ಈತನಕವೂ ಆಗದೇ ಕರಾವಳಿ ಪ್ರದೇಶದ ರಾಜಕಾರಣಿಗಳು ಕೇವಲ ಬಂಡಲ್ ಬಿಡುವಲ್ಲೇ ಕಾಲ ಕಳೆದರು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಖೇದ ವ್ಯಕ್ತಪಡಿಸಿದರು.

ಜೈ ತುಳುನಾಡು(ರಿ) ಇದರ ನೇತೃತ್ವದಲ್ಲಿ ಶ್ರೀಕ್ಷೇತ್ರ ಕೇಮಾರಿನಲ್ಲಿ ಭಾನುವಾರ ‘ಟೆಲಿಬರವು’ ಎಂಬ ಆಪ್ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

ಈ ವೇಳೆ ‘ಟೆಲಿಬರವು’ ತಂತ್ರಾಂಶದ ರಚನೆಕಾರರಾದ ಜ್ಙಾನೇಶ ದೇರಳಕಟ್ಟೆ ಇವರನ್ನು ಸನ್ಮಾನಿಸಲಾಯಿತು. ಈ ತಂತ್ರಾಂಶದಲ್ಲಿ ಕನ್ನಡದಲ್ಲಿ ಬರೆದಂತಹ ಅಕ್ಷರಗಳು ತುಳು ಲಿಪಿಗೆ ಪರಿವರ್ತನೆಯಾಗುತ್ತದೆ ಎಂದು ಸನ್ಮಾನಿತರಾದ ಜ್ಞಾನೇಶ್ ಹೇಳಿದರು.

ಜೈ ತುಳುನಾಡು ಸಂಘಟನೆಯ ಅಧ್ಯಕ್ಷ ವಿಶು ಶ್ರೀಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಕಳ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೈ ತುಲುನಾಡು ಸಂಘಟನೆಯ ಉಪಾಧ್ಯಕ್ಷ ಉದಯ್ ಪೂಂಜಾ ಉಪಸ್ಥಿತರಿದ್ದರು. ಕಿರಣ್ ತುಳುವೆ ಕಾರ್ಯಕ್ರಮ ನಿರೂಪಿಸಿದರು

- Advertisement -

Latest News

error: Content is protected !!