Saturday, June 28, 2025
Homeತಾಜಾ ಸುದ್ದಿನಟ ಜಗ್ಗೇಶ್ ಪಾದದ ಮೂಳೆ ಮುರಿತ

ನಟ ಜಗ್ಗೇಶ್ ಪಾದದ ಮೂಳೆ ಮುರಿತ

spot_img
- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಜಗ್ಗೇಶ್ ಅವರು ಕಾಲಿಗೆ ಏಟು ಮಾಡಿಕೊಂಡಿದ್ದಾರೆ.  ಅವರು  ಕಾಲು ಮುರಿದುಕೊಂಡ ಕಾರಣ, ಸಂಪೂರ್ಣ ವಿಶ್ರಾಂತಿಯಲ್ಲಿ ಇದ್ದಾರೆ.

ಈ ಕುರಿತಂತೆ ಅವರು ಟ್ವಿಟರ್ ನಲ್ಲಿ  ಮಾಹಿತಿ ಹಂಚಿಕೊಂಡಿದ್ದಾರೆ. ಸಣ್ಣ ಅಚಾತುರ್ಯ. ನಡಿಗೆಯಿಂದ ಪಾದದ ಮೂಳೆ ಮುರಿತ. 6 ವಾರದ ದಿಗ್ಬಂಧನ ನಡಿಗೆ ಎಂದು ತಿಳಿಸಿದ್ದಾರೆ.

ಟ್ವಿಟರ್  ನಲ್ಲಿ ಹಂಚಿಕೊಂಡಿರುವಂತ ಫೋಟೋದಲ್ಲಿ ಅವರ ಎಡಗಾಲಿನ ಮೊಳಕಾಲು ಕೆಳಗಿನಿಂದ ಪಾದದವರೆಗೆ ಬ್ಯಾಂಡೇಜ್ ಹಾಕಲಾಗಿದೆ. ಅವರ ಟ್ವೀಟ್ ನೋಡಿದ ಅಭಿಮಾನಿಗಳು ಶೀಘ್ರ ಚೇತರಿಸಿಕೊಳ್ಳುವಂತೆ ಶುಭ ಹಾರೈಸಿದ್ದಾರೆ.

- Advertisement -
spot_img

Latest News

error: Content is protected !!