Sunday, June 30, 2024
Homeತಾಜಾ ಸುದ್ದಿಇದು 'ಸಬ್ ಕಾ ವಿನಾಶ್' ಬಜೆಟ್: ಸಿದ್ದರಾಮಯ್ಯ

ಇದು ‘ಸಬ್ ಕಾ ವಿನಾಶ್’ ಬಜೆಟ್: ಸಿದ್ದರಾಮಯ್ಯ

spot_img
- Advertisement -
- Advertisement -

ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್ ಯಾವುದೇ ಕ್ಷೇತ್ರಕ್ಕೆ ಆದ್ಯತೆ ನೀಡಿಲ್ಲ, ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿಲ್ಲ ಮತ್ತು ಇದು ‘ಸಬ್ ಕಾ ವಿನಾಶ’ ಬಜೆಟ್ ಆಗಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಡುವಿನ ಸಮಯದಲ್ಲಿ ಜಂಗಲ್ ಲಾಡ್ಜ್‌ನಲ್ಲಿ ಇರುವ ಇವರು ಸುದ್ದಿಗಾರರೊಂದಿಗೆ ಮಾತನಾಡಿ, ಬಜೆಟ್ ಬಗ್ಗೆ ನನಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಅದಕ್ಕಾಗಿಯೇ ನಾನು ನಿರಾಶೆಗೊಂಡಿಲ್ಲ, ಆದರೆ, ಮಹಿಳೆಯರು, ರೈತರು ಮತ್ತು ಮಧ್ಯಮ ವರ್ಗದ ಜನರು ನಿರೀಕ್ಷೆಗಳನ್ನು ಹೊಂದಿದ್ದರು. ಈಗ ಅವರು ನಿರಾಶೆಗೊಂಡಿದ್ದಾರೆ,” ಎಂದು ಅವರು ಹೇಳಿದರು.

ಈ ವರ್ಷ 39.45 ಲಕ್ಷ ಕೋಟಿ ಬಜೆಟ್ ಮಂಡಿಸಲಾಗಿದೆ ಆದರೆ ಆರೋಗ್ಯ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಯಾವುದೇ ಕಾರ್ಯಕ್ರಮವನ್ನು ಘೋಷಿಸಿಲ್ಲ ಎಂದು ಹೇಳಿದರು.

“ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರಾವಧಿಯಲ್ಲಿ 93 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಅದಕ್ಕೆ 9.40 ಲಕ್ಷ ಕೋಟಿ ರೂ. ಬಡ್ಡಿ ಕಟ್ಟಬೇಕಿದೆ. ಪ್ರಧಾನಿ ಮೋದಿ ಈ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ” ಎಂದು ಅವರು ಕಿಡಿಕಾರಿದರು.

“ಪ್ರಧಾನಿ ಮೋದಿಯವರು ಯಾವಾಗಲೂ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಎಂಬ ಘೋಷಣೆಯನ್ನು ಎತ್ತುತ್ತಾರೆ. ನನ್ನ ದೃಷ್ಟಿಕೋನದಲ್ಲಿ, ಇದು ‘ಸಬ್ ಕಾ ವಿನಾಶ್’ ಬಜೆಟ್ ಆಗಿದೆ. ನದಿಗಳ ಜೋಡಣೆಯ ಯೋಜನೆ ಕೇವಲ ಘೋಷಣೆಯಾಗಿ ಉಳಿಯಲಿದೆ. ಮತ್ತು ಘೋಷಣೆ … ಇದು ರಿಯಾಲಿಟಿ ಆಗುವುದಿಲ್ಲ,” ಅವರು ಹೇಳಿದರು.

- Advertisement -
spot_img

Latest News

error: Content is protected !!