Thursday, June 4, 2026
Homeಪ್ರಮುಖ-ಸುದ್ದಿಅಯೋಧ್ಯಾ ರಾಮ ಮಂದಿರ ಮೇಲೆ ಐಎಸ್ಐ ಕಣ್ಣು!

ಅಯೋಧ್ಯಾ ರಾಮ ಮಂದಿರ ಮೇಲೆ ಐಎಸ್ಐ ಕಣ್ಣು!

- Advertisement -
- Advertisement -

ನವದೆಹಲಿ : ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಗಾಗಿ ಸಕಲ ಸಿದ್ಧತೆ ಭರದಿಂದ ಸಾಗಿದೆ. ಈ ನಡುವೆ ರಾಮ ಮಂದಿರದ ಮೇಲೆ ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟಲಿಜೆನ್ಸ್(ಐಎಸ್‌ಐ) ಕಣ್ಣು ಬಿದ್ದಿದೆ ಎಂದು ರಿಸರ್ಚ್ ಹಾಗೂ ಇಂಟಲಿಜೆನ್ಸ್ ವಿಂಗ್(R&AW) ಮಾಹಿತಿ ನೀಡಿದೆ. ಆಗಸ್ಟ್ 5ರಂದು ಮಂದಿರ ಶಂಕುಸ್ಥಾಪನೆಯಾಗಲಿದ್ದು, ಆಗಸ್ಟ್ 15ರಂದು ಅಯೋಧ್ಯೆ ಮೇಲೆ ದಾಳಿಗೆ ಉಗ್ರರು ಸಂಚು ರೂಪಿಸಿದ್ದು, ಇದಕ್ಕೆ ಐಎಸ್‌ಐ ನೆರವು ನೀಡುತ್ತಿದೆ ಎಂಬ ಸುದ್ದಿ ಬಂದಿದೆ.

ಐಎಸ್‌ಐ ಬೆಂಬಲಿತ ಲಷ್ಕರ್ ಇ ತೋಯ್ಬಾ ಹಾಗೂ ಜೈಶ್ ಎ ಮೊಹಮ್ಮದ್ ಉಗ್ರರು, ಅಯೋಧ್ಯೆ ಸೇರಿದಂತೆ ಭಾರತದ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸಲು ಸಜ್ಜಾಗುತ್ತಿದ್ದಾರೆ. ಮೂರರಿಂದ ಐದು ಉಗ್ರ ಸಂಘಟನೆಗಳು ಈ ದುಷ್ಕೃತ್ಯ ಎಸಗಲು ಸಂಚು ರೂಪಿಸಿವೆ ಎಂದು ರಾ ವರದಿ ಮಾಡಿದೆ.

ಭಾರತದಲ್ಲಿ ಆಂತರಿಕ ಕಿತ್ತಾಟದಿಂದ ಧಾರ್ಮಿಕ ಕೇಂದ್ರಗಳಿಗೆ ಹಾನಿಯುಂಟಾಗುವಂಥ ಸಂಚು ರೂಪಿಸಲಾಗಿದೆ. ವಿವಿಐಪಿಗಳನ್ನು ಗುರಿಯನ್ನಾಗಿಸಿಕೊಂಡು ದಾಳಿ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಎಚ್ಚರಿಕೆ ಸಂದೇಶ ಬಂದಿದೆ. ಹೀಗಾಗಿ, ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿನ ಭದ್ರತೆಯನ್ನು ಹೆಚ್ಚಿಸಲಾಗಿದೆ.e

- Advertisement -

Latest News

error: Content is protected !!