Wednesday, June 3, 2026
Homeಕರಾವಳಿಉಡುಪಿಉಡುಪಿ: ರೌಡಿ ಶೀಟರ್ ಇಸಾಕ್ ಪರಾರಿ ಪ್ರಕರಣ; ಇಸಾಕ್‌ನ ಪ್ರೇಯಸಿಯ ತಾಯಿಗೆ ನ್ಯಾಯಾಂಗ ಬಂಧನ

ಉಡುಪಿ: ರೌಡಿ ಶೀಟರ್ ಇಸಾಕ್ ಪರಾರಿ ಪ್ರಕರಣ; ಇಸಾಕ್‌ನ ಪ್ರೇಯಸಿಯ ತಾಯಿಗೆ ನ್ಯಾಯಾಂಗ ಬಂಧನ

- Advertisement -
- Advertisement -

ಉಡುಪಿ: ರೌಡಿ ಶೀಟರ್ ಇಸಾಕ್ ಪರಾರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಸಾಕ್‌ನ ಪ್ರೇಯಸಿಯ ತಾಯಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇಸಾಕ್‌ನ ಪ್ರೇಯಸಿಯ ತಾಯಿ ಫಾತಿಮಾ ನಜರ್‌ (46) ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಆರೋಪಿಗೆ ಆಶ್ರಯ ನೀಡಿದ್ದಲ್ಲದೆ ಕೆಲವೊಂದು ಪ್ರಕರಣಗಳಲ್ಲಿ ತೆರೆಮರೆಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಬಂಧನ ನಡೆಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈ ನಡುವೆ ಆರೋಪಿಯ ಪ್ರೇಯಸಿ ಸುಜೈನ್‌ ಪೊಲೀಸರ ವಿಚಾರಣೆಗೆ ಸಹಕರಿಸುತ್ತಿದ್ದು, ಕೆಲವೊಂದು ಅಂಶಗಳನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಇದರ ಆಧಾರದ ಮೇಲೆ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದು, ಉಡುಪಿ, ಮಂಗಳೂರು ಹಾಗೂ ಬೆಂಗಳೂರಿನಲ್ಲಿಯೂ ಆರೋಪಿಗಾಗಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸಿದ್ದಾರೆ.

ಆರೋಪಿ ಮತ್ತು ಪ್ರೇಯಸಿ ನಾಪತ್ತೆಯ ಸಿಸಿ ಟಿವಿ ದೃಶ್ಯ ಲಭ್ಯ ಥಾರ್‌ ವಾಹನವನ್ನು ಯದ್ವಾತದ್ವ ಚಲಾಯಿಸಿಕೊಂಡು ಬಂದ ಆರೋಪಿಯು ಮಣ್ಣಪಳ್ಳಕ್ಕೆ ಬರುವಾಗ ಟಯರ್‌ ಪಂಕ್ಚರ್‌ ಆದ ಪರಿಣಾಮ ನಡುರಸ್ತೆಯಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾನೆ. ಸ್ವಲ್ಪ ಸಮಯದ ಬಳಿಕ ಆತನ ಪ್ರೇಯಸಿ ಕಾರಿನಿಂದ ಇಳಿದು ಅಲ್ಲಿಯೇ ನಿಂತಿದ್ದಾಳೆ. ಬಳಿಕ ಜನರು ಒಟ್ಟಾಗುತ್ತಿದ್ದಂತೆ ಆಕೆಯೂ ಪರಾರಿಯಾಗಿರುವ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಪತ್ತೆಯಾಗಿದೆ. ಬಳಿಕ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಇತರ ಭಾಗದ ಸಿಸಿ ಟಿವಿಗಳನ್ನೂ ಪೊಲೀಸರು ಪರಿಶೀಲನೆಗೊಳಪಡಿಸಿದ್ದಾರೆ.

- Advertisement -

Latest News

error: Content is protected !!