Friday, June 27, 2025
Homeತಾಜಾ ಸುದ್ದಿಬಾಲಿವುಡ್ ನಟಿ ನೇಹಾ ಶರ್ಮಾ ರಾಜಕೀಯಕ್ಕೆ ಪ್ರವೇಶಿಸಲಿದ್ದಾರ?

ಬಾಲಿವುಡ್ ನಟಿ ನೇಹಾ ಶರ್ಮಾ ರಾಜಕೀಯಕ್ಕೆ ಪ್ರವೇಶಿಸಲಿದ್ದಾರ?

spot_img
- Advertisement -
- Advertisement -

ಬೆಂಗಳೂರು: ಬಾಲಿವುಡ್ ನಟಿ ಹಾಗೂ ಮಾಡೆಲ್ ನೇಹಾ ಶರ್ಮಾ ಅವರು ರಾಜಕೀಯಕ್ಕೆ ಇಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಬಿಹಾರದ ಬಾಗಲ್ಪುರ್ ಲೋಕಸಭಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವರ ಮೇಲೆ ಒತ್ತಡವಿದೆ.

2007ರಲ್ಲಿ ರಾಮಚರಣ್ ಅವರ ತೆಲುಗು ಚಿತ್ರ ಚಿರುತ ಮೂಲಕ ಚಿತ್ರರಂಗ ಪ್ರವೇಶಿಸಿದ ನೇಹಾ, ಕ್ರೂಕ್, ತಾನಾಜಿ ಸೇರಿದಂತೆ ಅನೇಕ ಚಿತ್ರಗಳಲ್ಲಿ, ವೆಬ್‌ ಸೀರಿಸ್‌ಗಳಲ್ಲಿ ಅಭಿನಯಿಸಿದ್ದಾರೆ. ಮಾಡೆಲ್ ಆಗಿಯೂ ಅವರು ಜನಪ್ರಿಯರಾಗಿದ್ದಾರೆ.

ನೇಹಾ ಶರ್ಮಾ ಅವರ ತಂದೆ ಬಿಹಾರದ ಕಾಂಗ್ರೆಸ್ ನಾಯಕ ಹಾಗೂ ಬಾಗಲ್ಪುರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಜಿತ್ ಶರ್ಮಾ ಅವರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಒತ್ತಡವಿದೆ. ಆದರೆ ಮಾಧ್ಯಮಗಳ ಜೊತೆ ಈ ಕುರಿತು ಮಾತನಾಡಿರುವ ಅವರು, ನಾನು ಈಗಾಗಲೇ ಶಾಸಕನಿದ್ದೇನೆ. ಕಾಂಗ್ರೆಸ್ ಟಿಕೆಟ್ ಕೊಟ್ಟರೆ ನನ್ನ ಮಗಳು ನೇಹಾ ಸ್ಪರ್ಧಿಸಲಿದ್ದಾಳೆ ಎಂದು ತಿಳಿಸಿದ್ದಾರೆ.

ಬಿಹಾರದ ಕೆಲವು ಸ್ಥಾನಗಳಿಗೆ ಇಂಡಿಯಾ ಮೈತ್ರಿಕೂಟ ಇನ್ನೂ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಮೂರ್ನಾಲ್ಕು ದಿನದಲ್ಲಿ ಟಿಕೆಟ್ ಅಂತಿಮಗೊಳ್ಳುತ್ತವೆ ಎಂದು ಅಜಿತ್ ಶರ್ಮಾ ತಿಳಿಸಿದ್ದಾರೆ. ಆದರೆ ರಾಜಕೀಯಕ್ಕೆ ಧುಮುಕುವ ಬಗ್ಗೆ ನೇಹಾ ಶರ್ಮಾ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

- Advertisement -
spot_img

Latest News

error: Content is protected !!