Thursday, June 4, 2026
Homeಕರಾವಳಿಗುಂಡು ಹಾರಿಸಿಕೊಂಡು 'IPS' ಅಧಿಕಾರಿ ಆರ್.ಪಿ ಶರ್ಮಾ ಆತ್ಮಹತ್ಯೆಗೆ ಯತ್ನ

ಗುಂಡು ಹಾರಿಸಿಕೊಂಡು ‘IPS’ ಅಧಿಕಾರಿ ಆರ್.ಪಿ ಶರ್ಮಾ ಆತ್ಮಹತ್ಯೆಗೆ ಯತ್ನ

- Advertisement -
- Advertisement -

ಬೆಂಗಳೂರು : ಐಪಿಎಸ್ ಅಧಿಕಾರಿ ಆರ್ ಪಿ ಶರ್ಮಾ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದಿದೆ.

ಐಪಿಎಸ್ ಅಧಿಕಾರಿ ಆರ್ ಪಿ ಶರ್ಮಾ ಬೆಂಗಳೂರಿನ ಕೊತ್ತನೂರಿನ ಮನೆಯಲ್ಲಿ 2 ಸುತ್ತು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಒಂದು ಗುಂಡು ಎದೆಗೆ ಒಂದು ಗುಂಡು ಕುತ್ತಿಗೆಗೆ ತಗುಲಿದ್ದು, ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸರ್ವೀಸ್ ರಿವಾಲ್ವರ್ ನಿಂದ ಅವರು ಗುಂಡು ಹಾರಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!