Thursday, June 4, 2026
Homeಕರಾವಳಿಉಡುಪಿದಕ್ಷಿಣಕನ್ನಡ ಜಿಲ್ಲೆಯಲ್ಲಿಂದು ಅಬ್ಬರಿಸಿದ ಕೊರೊನಾ, ಉಡುಪಿಯಲ್ಲೂ ನಿಂತಿಲ್ಲ ಕೋವಿಡ್ ಅಟ್ಟಹಾಸ

ದಕ್ಷಿಣಕನ್ನಡ ಜಿಲ್ಲೆಯಲ್ಲಿಂದು ಅಬ್ಬರಿಸಿದ ಕೊರೊನಾ, ಉಡುಪಿಯಲ್ಲೂ ನಿಂತಿಲ್ಲ ಕೋವಿಡ್ ಅಟ್ಟಹಾಸ

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿಂದು ಬರೋಬ್ಬರಿ 414 ಹೊಸ ಕೇಸುಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಕೇಸುಗಳ ಸಂಖ್ಯೆ 13,479ಕ್ಕೆ ಏರಿಕೆಯಾಗಿದೆ. ಹಾಗೇ 6 ಜನ ಇಂದು ಕೊರೊನಾಗೆ ಬಲಿಯಾಗಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 2,600 ಸಕ್ರಿಯ ಪ್ರಕರಣಗಳಿದ್ದು, 10,498 ಮಂದಿ ಗುಣಮುಖರಾಗಿದ್ದಾರೆ. ಇಂದು 346 ಜನ ಡಿಸ್ಚಾರ್ಜ್ ಆಗಿದ್ದಾರೆ. ಇದು ವರೆಗೂ ಕೊರೊನಾಗೆ 379 ಮಂದಿ ಬಲಿಯಾಗಿದ್ದಾರೆ.

ಇನ್ನು ಉಡುಪಿಯಲ್ಲಿ ಇಂದು 169 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 11,928ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 2,358 ಸಕ್ರಿಯ ಪ್ರಕರಣಗಳಿದ್ದು,9,469 ಮಂದಿ ಗುಣಮುಖರಾಗಿದ್ದಾರೆ. ಇಂದು 240 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಮೂವರು ಕೊರೊನಾಗೆ ಬಲಿಯಾಗೋದರೊಂದಿಗೆ ಇದುವರೆಗೂ ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 101 ಕ್ಕೇರಿದೆ.

- Advertisement -

Latest News

error: Content is protected !!