Friday, March 29, 2024
Homeಕರಾವಳಿಮಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿದ್ದ ಆರು ಬುಕ್ಕಿಗಳ ಬಂಧನ

ಮಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿದ್ದ ಆರು ಬುಕ್ಕಿಗಳ ಬಂಧನ

spot_img
- Advertisement -
- Advertisement -

ಮಂಗಳೂರು: ಮೊಬೈಲ್ ಆ್ಯಪ್‌ಗಳಾದ ಸ್ಟಾರ್ ಆ್ಯಪ್, ಲೋಟಸ್ ಬುಕ್247 ಬೆಟ್‌ಗಳಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿದ್ದ  ಆರೋಪದಲ್ಲಿ ಆರು ಮಂದಿ ಬುಕ್ಕಿಗಳನ್ನು ಮಂಗಳೂರು ನಗರ ಸಿಸಿಬಿ ಮತ್ತು ಇಕೊನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಸೋಮೇಶ್ವರ ಕುಂಪಲದ ವಿಕ್ರಂ, ಕೃಷ್ಣಾಪುರದ ಧನಪಾಲ್ ಶೆಟ್ಟಿ, ಮೂಲತಃ ರಾಜಸ್ಥಾನದ ಪ್ರಸ್ತುತ ಸುರತ್ಕಲ್‌ನಲ್ಲಿ ವಾಸವಾಗಿರುವ ಕಮಲೇಶ್, ಮುಂಬೈಯ ಹರೀಶ್ ಶೆಟ್ಟಿ, ಅಶೋಕ್ ನಗರದ ಪ್ರೀತೇಶ್ ಯಾನೆ ಪ್ರೀತಂ, ಉರ್ವ ಮಾರಿಗುಡಿಯ ಅವಿನಾಶ್ ಎಂದು ಗುರುತಿಸಲಾಗಿದೆ. 

ಈ ಬುಕ್ಕಿಗಳು ಬೇರೆಯವರ ಹೆಸರಿನಲ್ಲಿ ಮಂಗಳೂರಲ್ಲಿ ಆಕ್ಸಿಸ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಬಾಜಿದಾರರಿಂದ ಆನ್‌ಲೈನ್ ಮೂಲಕ ಬೆಟ್ಟಿಂಗ್ ಹಣವನ್ನು ಸಂಗ್ರಹಿಸುತ್ತಿದ್ದರು. ಮೊದಲಿಗೆ ಆರೋಪಿ ಕುಂಪಲದ ವಿಕ್ರಂನನ್ನು ಎಪ್ರಿಲ್ 21ರಂದು ವಶಕ್ಕೆ ಪಡೆದು ವಿಚಾರಿಸಲಾಯಿತು. ಆತ ನೀಡಿದ ಮಾಹಿತಿಯಂತೆ ಎಪ್ರಿಲ್ 26ರಂದು ಕೃಷ್ಣಾಪುರದ ಧನಪಾಲ ಶೆಟ್ಟಿ ಮತ್ತು ರಾಜಸ್ಥಾನ ಮೂಲದ ಕಮಲೇಶ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಯಿತು. ಏಪ್ರಿಲ್ 30ರಂದು ಪ್ರಮುಖ ಆರೋಪಿಗಳಾದ ಹರೀಶ್ ಶೆಟ್ಟಿ, ಪ್ರೀತೇಶ್ ಯಾನೆ ಪ್ರೀತಂ, ಅವಿನಾಶ್‌ರನ್ನು ವಿಶಾಖಪಟ್ಟಣದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ 20 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿ 20 ಲಕ್ಷ ರೂ. ಮತ್ತು 3 ಲಕ್ಷ ರೂ. ನಗದು ಹಾಗೂ ಆನ್‌ಲೈನ್ ಗೇಮ್‌ಗಾಗಿ ಬಳಸುತ್ತಿದ್ದ 10 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ನಗರದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!