Monday, May 17, 2021
Homeತಾಜಾ ಸುದ್ದಿ9 ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ: 5 ಹೆಣ್ಣು ಹಾಗೂ 4 ಗಂಡು ಮಕ್ಕಳು

9 ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ: 5 ಹೆಣ್ಣು ಹಾಗೂ 4 ಗಂಡು ಮಕ್ಕಳು

- Advertisement -
- Advertisement -

ಮಾಲಿ : ಮಹಿಳೆಯೊಬ್ಬರು ಬರೋಬ್ಬರಿ 9 ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಮಾಲಿ ದೇಶದಲ್ಲಿ ನಡೆದಿದೆ. ಈ ಬಗ್ಗೆ ಮಾಲಿ ಸರ್ಕಾರ ಕೂಡ ಖಚಿತ ಪಡಿಸಿದ್ದು ಎಲ್ಲಾ ಮಕ್ಕಳೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

9 ಮಕ್ಕಳಿಗೆ ಜನ್ಮ ನೀಡಿರುವ ಈ ಮಹಾತಾಯಿಯ ಹೆಸರು ಹಲೀಮಾ ಸಿಸ್ಸೆ (25). ಹಲೀಮಾ ಸಿಸ್ಸೆ ಗರ್ಭಿಣಿಯಾಗಿದ್ದಾಗ ವೈದ್ಯರು 7 ಶಿಶುಗಳು ಹೊಟ್ಟೆಯಲ್ಲಿ ಇರುವುದಾಗಿ ತಿಳಿಸಿದ್ದರು. ಆದ್ರೆ ಹೆರಿಗೆ ಆದ ನಂತರ 9 ಮಕ್ಕಳು ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

“ನವಜಾತ ಶಿಶುಗಳು (ಐದು ಹೆಣ್ಣು ಮತ್ತು ನಾಲ್ಕು ಗಂಡು) ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ಎಲ್ಲಾ ಮಕ್ಕಳನ್ನು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿದೆ ಎಂದು ಮಾಲಿಯ ಆರೋಗ್ಯ ಸಚಿವ ಫಾಂಟಾ ಸಿಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisment -

Latest News

error: Content is protected !!