Sunday, June 7, 2026
Homeತಾಜಾ ಸುದ್ದಿಸುಟ್ಟ ರೀತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ ಪ್ರಕರಣ: ಬೆಳ್ತಂಗಡಿ ಪೊಲೀಸರಿಂದ ಪ್ರಕರಣದ ತನಿಖೆ ಚುರುಕು

ಸುಟ್ಟ ರೀತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ ಪ್ರಕರಣ: ಬೆಳ್ತಂಗಡಿ ಪೊಲೀಸರಿಂದ ಪ್ರಕರಣದ ತನಿಖೆ ಚುರುಕು

- Advertisement -
- Advertisement -

ಬೆಳ್ತಂಗಡಿ : ಡಿಸೆಂಬರ್ 12 ರಂದು ಸಂಜೆ ನಡ ಗ್ರಾಮದ ಸೊರಕೆ ಎಂಬಲ್ಲಿ 35-40 ವರ್ಷದ ವಯಸ್ಸಿನ ಅಪರಿಚಿತ ಶವವೊಂದು ಅರೆ ಸುಟ್ಟ ರೀತಿಯಲ್ಲಿ ಕಂಡು ಬಂದಿತ್ತು. ಡಿಸೆಂಬರ್ 13 ರಂದು ನಡೆಸಲಾದ ತನಿಖೆಯಲ್ಲಿ ಸುಟ್ಟ ಸ್ಥಳದಲ್ಲಿ ಹಲವು ವಸ್ತುಗಳು ಪತ್ತೆಯಾಗಿತ್ತು.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಸಾಕ್ಷಿ ನಾಶ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೆಳ್ತಂಗಡಿ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಚುರುಕುಗೊಳಿಸಿದ್ದು ವಿವಿಧ ಅಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಒಂದು ತಂಡ ಅಪರಿಚಿತ ಮಹಿಳೆಯ ಗುರುತು ಪತ್ತೆ ಹಚ್ಚಲು ರಾಜ್ಯದಲ್ಲಿ ನಾಪತ್ತೆಯಾದ ಮಹಿಳೆಯರ ಪ್ರಕರಣದ ದಾಖಲೆಗಳನ್ನು ಪಡೆದುಕೊಂಡು ಪರಿಶೀಲನೆಯಲ್ಲಿ ತೊಡಗಿದೆ.

ಪೊಲೀಸರ ಇನ್ನೊಂದು ತಂಡ ಮಹಿಳೆಯ ಕೊಲೆ ಪ್ರಕರಣ ಸಂಬಂಧ ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

- Advertisement -

Latest News

error: Content is protected !!