Wednesday, June 24, 2026
Homeಕರಾವಳಿಸಂತ ಅಲೋಶಿಯಸ್ ವಿವಿಯಲ್ಲಿ ಅಂತರರಾಷ್ಟ್ರೀಯ ಹಿಂದಿ ಭಾಷಾ ಸಮ್ಮೇಳನ

ಸಂತ ಅಲೋಶಿಯಸ್ ವಿವಿಯಲ್ಲಿ ಅಂತರರಾಷ್ಟ್ರೀಯ ಹಿಂದಿ ಭಾಷಾ ಸಮ್ಮೇಳನ

- Advertisement -
- Advertisement -

ಮಂಗಳೂರು: ವಿಶ್ವ ಹಿಂದಿ ದಿನದ ಅಂಗವಾಗಿ “ಜಾಗತಿಕ ಪರಿಧಿಯಲ್ಲಿ ಹಿಂದಿಯ ಭವಿಷ್ಯ” ಎಂಬ ವಿಷಯದಲ್ಲಿ ಒಂದು ದಿನದ ಅಂತರರಾಷ್ಟ್ರೀಯ ಭಾಷಾ ಸಮ್ಮೇಳನವನ್ನು ಜನವರಿ 10, 2026ರಂದು ನಗರದಲ್ಲಿ ಆಯೋಜಿಸಲಾಯಿತು.

ಈ ಕಾರ್ಯಕ್ರಮವನ್ನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಹಿಂದಿ ವಿಭಾಗ, ಹಿಂದಿ ಸಂಘ, ಭಾಷಾ ಮತ್ತು ಸಾಂಸ್ಕೃತಿಕ ಅಧ್ಯಯನ ನಿಕೇತನ, ಕಾನೂನು ಅಧ್ಯಯನ ನಿಕೇತನ, ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಕಚೇರಿ ಮತ್ತು ವಿ.ಆರ್.ಡಿ.ಎಫ್. ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆಸಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನ ಬರೋಡಾ ಅಕಾಡೆಮಿ, ಮಂಗಳೂರು ಮುಖ್ಯ ವ್ಯವಸ್ಥಾಪಕರಾದ ಶ್ರೀ ವಿಕಾಸ್ ಸಿಂಗ್ ಅವರು ನೆರವೇರಿಸಿದರು.

ಪ್ರಸ್ತಾವಿಕವಾಗಿ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಮುಕುಂದ ಪ್ರಭು ಅವರು ಸ್ವಾತಂತ್ರ್ಯಕ್ಕೂ ಮುನ್ನ ಮತ್ತು ನಂತರ ಹಿಂದಿಯ ಬಳಕೆಯ ಕುರಿತು ಮಾತನಾಡಿದರು.

ವಿಶ್ವ ಹಿಂದಿ ದಿನದ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತರನ್ನು ಗೌರವಿಸಲಾಯಿತು. ಡಾ. ಮಹಬೂಬಅಲಿ ನದಾಫ್ ಅವರು ಸ್ವಾಗತಿಸಿದರು. ಆದಿತ್ ಕುಮಾರ್, ಜಲ್ಪಾ ಮತ್ತು ಖುಶ್ಬೂ ವಿಷಯ-ವಿಶೇಷಜ್ಞರನ್ನು ಪರಿಚಯಿಸಿದರು. ಮನೀಶ್ ಧನ್ಯವಾದ ಸಮರ್ಪಿಸಿದರು.

ಸುಮಾರು 350 ಮಂದಿ ಭಾಗವಹಿಸಿ ಭಾಷಾ ಸಮ್ಮೆಳನವನ್ನು ಯಶಸ್ವಿಗೊಳಿಸಿದರು.

- Advertisement -

Latest News

error: Content is protected !!