ದುಬೈ : ಕರ್ನಾಟಕ ಜನಪದ ಪರಿಷತ್ ಯುಎಇ ಘಟಕದ ವತಿಯಿಂದ ದುಬೈ ನಾದ್ ಅಲ್ ಶೀಬಾ ಜಿಮ್ಸ್ ಮಾರ್ಡನ್ ಅಕಾಡೆಮಿಯಲ್ಲಿ ಅಂತರರಾಷ್ಟ್ರೀಯ ಜನಪದ ಉತ್ಸವ – 2025” ನೆರವೇರಿತು. ಕರ್ನಾಟಕ ಜನಪದ ಪರಿಷತ್ ಬೆಂಗಳೂರು ಅವರ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಸ್ಥಾಪಿತವಾದ ಯುಎಇ ಘಟಕ, ರಾಜ್ಯದ ಜೀವಂತ ಜನಪದ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಉಳಿಸಿ ಬೆಳೆಸುವ ಕನಸನ್ನು ಈ ಉತ್ಸವದ ಮೂಲಕ ಯಶಸ್ವಿಯಾಗಿ ಅನಾವರಣಗೊಳಿಸಲಾಯಿತು.

ಮೊತ್ತ ಮೊದಲಬಾರಿಗೆ ಕರ್ನಾಟಕ ಜಾನಪದ ಪರಿಷತ್ತಿನ ಘಟಕವೊಂದು ವಿದೇಶದದಲ್ಲಿ ಸ್ಥಾಪನೆ ಗೊಂಡಿದೆ. ಜಾನಪದ ಪರಿಷತ್ ಬೆಂಗಳೂರು ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಆದಿತ್ಯ ನಂಜೆರಾಜ್ ಮತ್ತು ಬೆಂಗಳೂರು ಕೇಂದ್ರದ ಅಧ್ಯಕ್ಷ ಬೋರಲಿಂಗಯ್ಯನವರು ಯುಎಇ ಘಟಕದ ಲಾಂಛನ ವನ್ನು ಲೋಕಾರ್ಪಣೆ ಗೊಳಿಸುವುದರ ಮೂಲಕ ಘಟಕವನ್ನು ಉದ್ಘಾಟಿಸಿದರು . ನಂತರ ಮಾತನಾಡುತ್ತಾ ಜಾನಪದ ಪರಿಷತ್ ನ ವಿಸ್ತರಣೆಗೆ ಹರ್ಷ ಪಡಿಸುತ್ತಾ ಕೇಂದ್ರ ಸಂಸ್ಥೆಯಿಂದ ಈ ಘಟಕಕ್ಕೆ ಸರ್ವ ವಿಧದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅಂತರಾಷ್ಟ್ರೀವ ಜಾನಪದ ಉತ್ಸವ 2025 ನ್ನು ಅಬುದಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಉದ್ಘಾಟಿಸಿದರು. ನಂತರ ಮಾತನಾಡುತ್ತಾ ಮರೆವಿನಂಚಿನಲ್ಲಿರುವ ಜಾನಪದ ಕಲೆಗಳು ಉಳಿಸುವುದು ನಮ್ಮ ಕರ್ತವ್ಯ ಜೊತೆಯಲ್ಲಿ ಇಂತಹ ಅಂತರಾಷ್ಟ್ರೀಯ ಮಟ್ಟದ ಜನಪದ ಕಾರ್ಯಕ್ರಮಗಳು ಪ್ರತಿ ವರ್ಷವು ನಡೆಸುವುದರ ಜೊತೆಗೆ ಉಳಿಸುವ ಪ್ರಯತ್ನ ಮಾಡಬೇಕು ಎಂದರು. ನಂತರ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ಅಧ್ಯಕ್ಷರಾದ ಯುಎಇ ಘಟಕದ ಅಧ್ಯಕ್ಷರು ಘಟಕದ ಇತರ ಪದಾಧೀಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು.

ದುಬೈಯಲ್ಲಿ ನಡೆದ ಅಂತರಾಷ್ಟ್ರೀಯ ಜಾನಪದ ಉತ್ಸವವನ್ನು ಕರ್ನಾಟಕ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೂತನವಾಗಿ ಆರಂಭಗೊಂಡ ಯುಎಇ ಘಟಕಕ್ಕೆ ಶುಭಾಶಯ ತಿಳಿಸಿ, “ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನಮ್ಮೆಲ್ಲರಿಗೂ ಒಂದು ಭಾಗ್ಯ” ಜಾನಪದ ಕಲೆಗಳ ಅರಿವು ಯುವ ಪೀಳಿಗೆಗೆ ತಲುಪಿಸುವ ಅಗತ್ಯವಿದೆ. ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಈ ಶ್ರೀಮಂತ ಕಲೆಗಳ ಪರಿಚಯ ಮಾಡಿಸಬೇಕು; ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆತಂದರೆ, ಅವರಲ್ಲಿ ಕಲೆಗಳ ಕುರಿತು ಜ್ಞಾನ ಹಾಗೂ ಅಭಿಮಾನ ಬೆಳೆಸಬಹುದು . ಎಲ್ಲ ಜನರನ್ನು ಖುಷಿಪಡಿಸುವುದು ಕಷ್ಟ ಸಾಧ್ಯ ಆದ್ರೆ ನಾವು ಮಾಡುವ ಕೆಲಸಗಳನ್ನು ಶ್ರದ್ದೆಯಿಂದ ಮಾಡಬೇಕು ಎಂದರು.
ಮತ್ತೋರ್ವ ಮುಖ್ಯ ಅತಿಥಿ ದುಬೈ ಭಾರತೀಯ ರಾಯಭಾರಿ ಕಛೇರಿಯ ಪ್ರತಿನಿಧಿ ಬ್ರೀಜೆಂದ್ರ ಸಿಂಗ್ ಅವರು ಕಾರ್ಯಕ್ರಮಕ್ಕೂ ಹಾಗೂ ನೂತನ ತಂಡಕ್ಕೂ ಶುಭ ಹಾರೈಸಿ, “ಇಂತಹ ಉತ್ತಮ ಕಾರ್ಯಗಳಿಗೆ ನಮ್ಮ ಸಹಕಾರ ಸದಾ ಇರುತ್ತದೆ” ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಹಲವು ಗಣ್ಯರು, ಕಲಾವಿದರು ಹಾಗೂ ಕನ್ನಡಿಗರ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.

ಕರ್ನಾಟಕ ಜನಪದ ಪರಿಷತ್ ಶಿಫಾರಸಿನ ಮೇರೆಗೆ “ಡಾ. ಎಚ್. ಎಲ್. ನಾಗೇಗೌಡ ಅಂತರರಾಷ್ಟ್ರೀಯ ಜನಪದ ಪ್ರಶಸ್ತಿ” ಯನ್ನು ಜನಪ್ರಿಯ ಕಲಾವಿದರಾದ ಪದ್ಮಶ್ರೀ ರಾಣಿ ಮಾಚಯ್ಯ (ಕೊಡಗು ) ಹಾಗೂ ಮಲವಳ್ಳಿ ಮಹದೇವ ಸ್ವಾಮಿ (ಮೈಸೂರು) ಅವರಿಗೆ ಪ್ರದಾನ ಮಾಡಲಾಯಿತು. ಪ್ರೊ. ಕೆ. ಇ. ರಾಧಾಕೃಷ್ಣ ಅವರಿಗೆ “ಗುರು ಸಾವ್ಯಸಾಚಿ” ಪ್ರಶಸ್ತಿ, ವರದರಾಜ ಶೆಟ್ಟಿಗೆ ಕನ್ನಡ ಕಲಾಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮಕ್ಕೆ ಘಟಕದ ಅಧ್ಯಕ್ಷರಾದ ಶ್ರೀಸದಾನ್ ದಾಸ್ ಅತಿಥಿಗಳನ್ನ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿಯಾದ ಆರತಿ ಅಡಿಗ ವಂದಿಸಿದರು ಮತ್ತು ಕಾರ್ಯಕ್ರಮದ ನಿರ್ದೇಶಕರಾದ ಶ್ರೀ ಬಾಸುಮ ಕೊಡಗು ನಿರೂಪಿಸಿದರು.ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ಖ್ಯಾತ ಜನಪದ ಕಲಾವಿದರು ಹಾಗೂ ಯುಎಇಯಲ್ಲಿನ ಅನಿವಾಸಿ ಕನ್ನಡಿಗ ಕಲಾವಿದರು ನೀಡಿದ ಮನೋರಂಜನಾತ್ಮಕ ಪ್ರದರ್ಶನಗಳು ಪ್ರೇಕ್ಷಕರ ಮನಗೆದ್ದವು.

ಕರ್ನಾಟಕ ಜನಪದ ಪರಿಷತ್ ಬೆಂಗಳೂರು ಅಧ್ಯಕ್ಷ ಎಚ್. ಸಿ. ಬೋರಲಿಂಗಯ್ಯ, ಬಾಸುಮ ಕೊಡಗು ಉತ್ಸವ ನಿರ್ದೇಶಕರು ಮತ್ತು ಘಟಕದ ಅಧ್ಯಕ್ಷರು ಸಾದಾನ್ ದಾಸ್ ಹಾಗೂ ಉಪಾಧ್ಯಕ್ಷರಾದ ನೋಯೇಲ್ ಅಲ್ಮೆಡಾ , ದೀನೇಶ್ ಶೆಟ್ಟಿ ಕೊಟ್ಟಿಂಜ , ಡಾ.ವಿಜಯ ಗುಜ್ಜಾರ ಮತ್ತು ಜೊತೆ ಕಾರ್ಯದರ್ಶಿ ಜಸ್ಮಿತಾ ವಿವೇಕ್ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಭಾಗ್ಯರಾಜ್ ರಾವ್ , ಶಂಕರ್ ಬಬಲೇಶ್ವರ್ ಮಾಧ್ಯಮ ಸಲಹೆಗಾರರಾದ ವಿವೇಕ್ ಆನಂದ್ , ವಿಘ್ನೇಶ್ ಕುಂದಾಪುರ ಅಂತೇಯೇ ಕಾರ್ಯಕಾರಿ ಸಮಿತಿಯ ಸದಸ್ಯರಾದ ಜಗನ್ನಾಥ ಬೆಳ್ಳಾರೆ, ಅಬ್ದುಲ್ ಹಕೀಮ್, ಸುಗಂದರಾಜ್ ಬೇಕಲ್, ಚೇತನ್ ಕುಮಾರ್ ಸುಬ್ರಹ್ಮಣ್ಯ, ಶ್ರೀ ಕೃಷ್ಣ ಮುಲುಗುಂಡು,ಖಾಂತ ಕೃಷ್ಣೆಗೌಡ, ವಿನಾಯಕ ಹೆಗ್ಡೆ, ಸಂತೋಷ್ ಶೆಟ್ಟಿ ಪೊಳಲಿ, ಅರುಣ್ ಕುಮಾರ್,ರವಿ ನಾಗೂರು, ವೆಂಕಟರಮಣ ಕಾಮತ್ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಮತಿ ಆರತಿ ಅಡಿಗ ಧನ್ಯವಾದ ಸಲ್ಲಿಸಿದರು.


