Sunday, June 7, 2026
Homeಅಪರಾಧಕಾರಿಂಜೇಶ್ವರ ದೇಗುಲದ ಒಳಗಡೆ ಪಾದರಕ್ಷೆ ಧರಿಸಿ ವಿಕೃತಿ ಮೆರೆದ ಅನ್ಯಧರ್ಮಿಯರು!

ಕಾರಿಂಜೇಶ್ವರ ದೇಗುಲದ ಒಳಗಡೆ ಪಾದರಕ್ಷೆ ಧರಿಸಿ ವಿಕೃತಿ ಮೆರೆದ ಅನ್ಯಧರ್ಮಿಯರು!

- Advertisement -
- Advertisement -

ಬಂಟ್ವಾಳ: ಕಾರಿಂಜೇಶ್ವರ ದೇವಸ್ಥಾನದೊಳಗಡೆ ಅನ್ಯಧರ್ಮಿಯರು ಚಪ್ಪಲಿ ಹಾಕಿಕೊಂಡು ವಿಕೃತಿ ಮೆರದ ಘಟನೆಯೊಂದು ಸದ್ಯ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ವೈರಲ್ ಆಗಿದೆ.

ದೇವಸ್ಥಾನದ ಒಳಗಡೆ ಚಪ್ಪಲಿಯನ್ನು ಧರಿಸಿದ್ದಲ್ಲದೆ, ಅಕ್ರಮ ಅಂಗಣ ಪ್ರವೇಶಸಿ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ಪೋಟೊ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ದೇವಾಲಯದ ಭಕ್ತರಿಂದ ಹಾಗೂ ಹಿಂದೂ ಪರ ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಬಂಟ್ವಾಳ ಹಿಂದು ಜಾಗರಣ ವೇದಿಕೆ ಘಟನೆಯನ್ನು ಖಂಡಿಸಿ ಕಾನೂನು ಸಮರಕ್ಕೆ ಸಿದ್ಧವಾಗುವ ಸೂಚನೆ ನೀಡಿದೆ.

ಹಿಂದೂಗಳು ಪವಿತ್ರವಾಗಿ ಪೂಜಿಸುವ ಸ್ಥಳಗಳಲ್ಲಿ ಇಂತಹ ಮತಿಗೇಡಿಗಳು ಬಂದು ಅಪಪ್ರಚಾರ ಮಾಡುವುದಲ್ಲದೆ, ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೋಕಿಗಾಗಿ ಹರಿಬಿಡುತ್ತಾರೆ.
ಇಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯ.

- Advertisement -

Latest News

error: Content is protected !!