Thursday, June 4, 2026
Homeಉದ್ಯಮIntel-Jio ಡೀಲ್ : ಜಿಯೋದಲ್ಲಿ ಹೂಡಿಕೆ ಮಾಡಲು ಮುಂದಾದ ಮತ್ತೊಂದು ಟೆಕ್ ದೈತ್ಯ

Intel-Jio ಡೀಲ್ : ಜಿಯೋದಲ್ಲಿ ಹೂಡಿಕೆ ಮಾಡಲು ಮುಂದಾದ ಮತ್ತೊಂದು ಟೆಕ್ ದೈತ್ಯ

- Advertisement -
- Advertisement -

ಮುಂಬೈ, ಜುಲೈ 3: ಇತ್ತೀಚೆಗೆ ಭಾರತೀಯ ಟೆಲಿಕಾಂ ದೈತ್ಯ ‘ರಿಲಯನ್ಸ್ ಜಿಯೋ’ ಕಂಪನಿ ಮೇಲೆ ಭಾರೀ ಪ್ರಮಾಣದಲ್ಲಿ ಹೂಡಿಕೆ ಹರಿದು ಬರುತ್ತಿದೆ. ಇದರಿಂದ ‘ಜಿಯೋ’ ಹೂಡಿಕೆದಾರರಿಗೆ ಹಾಟ್ ಪೇವರೇಟ್ ಆಗಿದೆ.
ಇದೀಗ ಇಂಟೆಲ್ ಕಾರ್ಪೊರೇಶನ್‌ನ ಹೂಡಿಕೆ ವಿಭಾಗವಾದ ಇಂಟೆಲ್ ಕ್ಯಾಪಿಟಲ್ ಸುಮಾರು 1,894 ಕೋಟಿ ರುಪಾಯಿಯನ್ನು ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಹೂಡಲು ಮುಂದಾಗಿದೆ.
ಇಂಟೆಲ್​ ಹೂಡಿಕೆಯಿಂದಾಗಿ ಜಿಯೋ ಈವರೆಗೆ 1,17,588.45 ಕೋಟಿ ರೂಪಾಯಿ ಕಲೆ ಹಾಕಿದಂತಾಗಿದೆ. ಮೊಟ್ಟ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್​ಬುಕ್​, ಜಿಯೋದ ಶೇ. 9.9 ಷೇರನ್ನು ಖರೀದಿ ಮಾಡಿತ್ತು. ಇದಾದ ನಂತರ ಸಿಲ್ವರ ಲೇಕ್​ ಎರಡು ಬಾರಿ, ವಿಸ್ತಾ ಇಕ್ವಿಟಿ ಪಾರ್ಟನರ್​, ಜನರಲ್​ ಅಟ್ಲಾಂಟಿಕ್​, ಕೆಕೆಆರ್​, ಮುಬಡಾಲಾ, ಎಡಿಐಎ, ಟಿಪಿಜಿ, ಎಲ್​ ಕ್ಯಾಟರ್ಟನ್​, ಪಿಐಎಫ್​ ಮತ್ತು ಇಂಟೆಲ್​ ಹೂಡಿಕೆ ಮಾಡಿದೆ.

- Advertisement -

Latest News

error: Content is protected !!