Sunday, May 5, 2024
Homeತಾಜಾ ಸುದ್ದಿನಾಳೆಯಿಂದ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭ : ಪೋಷಕರು, ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ ಕೊಟ್ಟ ಶಿಕ್ಷಣ ಸಚಿವರು

ನಾಳೆಯಿಂದ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭ : ಪೋಷಕರು, ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ ಕೊಟ್ಟ ಶಿಕ್ಷಣ ಸಚಿವರು

spot_img
- Advertisement -
- Advertisement -

ಬೆಂಗಳೂರು : ನಾಳೆಯಿಂದ ಶಾಲೆ-ಕಾಲೇಜು ಆರಂಭವಾಗಲಿದ್ದು, ಪೋಷಕರು, ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಸೂಚನೆ ಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ ಎಂದು ತಿಳಿಸಿದ್ದಾರೆ.

2021 ಜನವರಿ 1 ಒಂದು ಹೊಸ ಯುಗದ ಪ್ರಾರಂಭ ಆಗುತ್ತಿದೆ. ನಾವೆಲ್ಲ 6 ತಿಂಗಳಿಂದ ನಮ್ಮ ರಾಜ್ಯದಲ್ಲಿ ಶಾಲೆಗಳು ಇರಲಿಲ್ಲ. ನಮ್ಮ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣಕ್ಕೆ, ಕಲಿಕೆಗೆ ತೊಂದರೆಯಾಗಿದೆ. ನಮ್ಮ ಶಿಕ್ಷಣ ಇಲಾಖೆಯಿಂದ ಚಂದನ ವಾಹಿನಿ ಮೂಲಕ ಪಾಠಗಳನ್ನು ಕಲಿಸುವ ಕಾರ್ಯಕ್ರಮ ನಡೆಸಿದ್ದೇವು. ಇದೀಗ ಜನವರಿ 1 ರಿಂದ ನಮ್ಮ ರಾಜ್ಯದ ಆರೋಗ್ಯ ಇಲಾಖೆ ಮತ್ತು ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನ ಮೇಲೆ ಎಸ್‌ಎಸ್‌ಎಲ್ ಸಿ ಮತ್ತೆ 12 ನೇ ತರಗತಿ ಪ್ರಾರಂಭವಾಗುತ್ತಿವೆ. ಉಳಿದ 6,7,8 ಮತ್ತು 9 ನೇ ತರಗತಿಗಳು ವಿದ್ಯಾಗಮದ ಮೂಲಕ ತರಗತಿಗಳು ಆರಂಭವಾಗಲಿವೆ ಎಂದು ತಿಳಿಸಿದ್ದಾರೆ.

ಅನೇಕ ಪೋಷಕರು ಗ್ರಾಮೀಣ ಭಾಗದಲ್ಲಿ ಶಾಲೆಗಳು ಆರಂಭವಾಗಬೇಕೆಂದು ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಕೊರೊನಾ 8 ತಿಂಗಳಿಂದ ಶಾಲಾ ಚಟುವಟಿಕೆ ನಡೆಸಲು ಅಡ್ಡಿಯಾಗಿದೆ. ಈವಾಗ ಮೊದಲನೇ ಹಂತದಲ್ಲಿ ಎಸ್‌ಎಸ್‌ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಾಗಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಮಾಡುತ್ತೇವೆ. ಈ ತರಗತಿಗಳು ಯಶಸ್ವಿಯಾಗಬೇಕು ಎಂದರೆ ಪೋಷಕರು ಸಹಕಾರ ಮಾಡಬೇಕು ಎಂದಿದ್ದಾರೆ.

ಯಾವುದೇ ಆತಂಕ ಇಲ್ಲದೇ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ. ನಿಮ್ಮ ಮಕ್ಕಳನ್ನು ಮನೆಯಲ್ಲಿ ಹೇಗೆ ನೋಡಿಕೊಳ್ಳುತ್ತೀರೋ ನಮ್ಮ ಶಿಕ್ಷಕರು ಹಾಗೆ ನೋಡಿಕೊಳ್ಳುತ್ತಾರೆ. ಶಾಲೆಗೆ ಬರುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕೆಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!