Sunday, June 7, 2026
Homeಅಪರಾಧಚಿಕಿತ್ಸೆ ನೀಡುವ ಬದಲು ಇನ್ಸ್ಟಾಗ್ರಾಮ್‌ ರೀಲ್ಸ್‌ ನೋಡುತ್ತಾ ಕೂತ ಡಾಕ್ಟರ್; ಎದೆ ನೋವಿನಿಂದ ಮಹಿಳೆ ಮೃತ್ಯು

ಚಿಕಿತ್ಸೆ ನೀಡುವ ಬದಲು ಇನ್ಸ್ಟಾಗ್ರಾಮ್‌ ರೀಲ್ಸ್‌ ನೋಡುತ್ತಾ ಕೂತ ಡಾಕ್ಟರ್; ಎದೆ ನೋವಿನಿಂದ ಮಹಿಳೆ ಮೃತ್ಯು

- Advertisement -
- Advertisement -

ಲಕ್ನೋ: ವೈದ್ಯರೊಬ್ಬ ನಿರ್ಲಕ್ಷ್ಯದಿಂದ ಎದೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಈ ಘಟನೆಯು ಮಹಾರಾಜ ತೇಜ್ ಸಿಂಗ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡುವ ಬದಲು ಇನ್ಸ್ಟಾಗ್ರಾಮ್‌ ರೀಲ್ಸ್‌ ನೋಡುತ್ತಾ ಕೂತ ಘಟನೆಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು,  ವಿಡಿಯೋ ವೈರಲ್‌ ಆಗಿದೆ.

ಘಟನೆಯ ಬಗ್ಗೆ: ಪ್ರವೇಶ್ ಕುಮಾರಿ ಎನ್ನುವವರು ತನ್ನ ಮಗ ಮಗ ಗುರುಶರಣ್ ಸಿಂಗ್ ಎನ್ನುವವರಲ್ಲಿ ತನಗೆ ತೀವ್ರ ಎದೆನೋವು ಆಗುತ್ತಿದೆ ಎಂದು ಹೇಳಿದ್ದು, ಈ ಸಂದರ್ಭದಲ್ಲಿ ತಾಯಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಆದರ್ಶ್ ಸೆಂಗರ್ ಎನ್ನುವ ಡಾಕ್ಟರ್ ಕರ್ತವ್ಯದಲ್ಲಿದ್ದರು.‌ ಆ ವೇಳೆಯಲ್ಲಿ ರೋಗಿ ತೀವ್ರವಾದ ಎದೆ ನೋವಿನಿಂದ ಬಳಲುತ್ತಿದ್ದರು ಆಕಯೆನ್ನು ಬೆಡ್ ನಲ್ಲಿ ಮಗಿಸಿದೆ, ಡಾಕ್ಟರ್‌ ಅಲ್ಲೇ ಕೂತು ಇನ್ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌ನಲ್ಲಿ ರೀಲ್ಸ್‌ ನೋಡುತ್ತಿದ್ದರು. ಹೀಗಾಗಿ ರೋಗಿಯನ್ನು ನರ್ಸ್‌ ಹಾಗೂ ಇತರೆ ಸಿಬ್ಬಂದಿಗಳು ಪರೀಕ್ಷೆ ಮಾಡಲು ಶುರು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಈ ಕುರಿತಂತೆ ಪ್ರತಿಕ್ರಯಿಸಿದ ಗುರುಶರಣ್ ಸಿಂಗ್ “ಡಾ . ಸೆಂಗಾರ್ ಚಿಕಿತ್ಸೆ ಅವರು ನನ್ನ ತಾಯಿಯ ಸ್ಥಿತಿ ಹದಗೆಟ್ಟಿದ್ದರೂ, ನೀಡಲು ಬರಲೇ ಇಲ್ಲ. ಬಹಳ ಸಮಯದ ನಂತರ ಎದ್ದು ಬಂದು ನೋಡಿದಾಗ ನನ್ನ ತಾಯಿ ಆದಾಗಲೇ ಮೃತಪಟ್ಟಿದ್ದರು. ಈ ಸಮಯದಲ್ಲಿ ಹತಾಶೆಯಿಂದ ನನ್ನ ಕಪಾಳಕ್ಕೆ ಬಾರಿಸಿದ್ದಾರೆ” ಎಂದು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಕಂಡ ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ಮದನ್ ಲಾಲ್ ಕೂಡ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕುಟುಂಬಸ್ಥರ ಆರೋಪ ನಿಜವೆಂದು ಕಂಡುಬಂದರೆ ವೈದ್ಯರ ವಿರುದ್ಧ ಕಠಿಣ ಇಲಾಖಾ ಕ್ರಮ ಜರುಗಿಸಲಾಗುವುದು” ಎಂದು ಅವರು ಹೇಳಿದರು.  

ಈ ಘಟನೆಯ ಬಗ್ಗೆ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!