Wednesday, July 2, 2025
Homeಕ್ರೀಡೆಅಂಜು ಬಾಬಿ ಜಾರ್ಜ್ ಬಿಚ್ಚಿಟ್ರು ಭಯಾನಕ ಸತ್ಯ: ಒಂದೇ ಕಿಡ್ನಿಯಲ್ಲಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದರು ಮಾಜಿ...

ಅಂಜು ಬಾಬಿ ಜಾರ್ಜ್ ಬಿಚ್ಚಿಟ್ರು ಭಯಾನಕ ಸತ್ಯ: ಒಂದೇ ಕಿಡ್ನಿಯಲ್ಲಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದರು ಮಾಜಿ ಅಥ್ಲೀಟ್

spot_img
- Advertisement -
- Advertisement -

ಕೇರಳ: ಮಾಜಿ ಅಥ್ಲೀಟ್ ಅಂಜು ಬಾರಿ ಜಾರ್ಜ್ ಅವರು ತಮ್ಮ ಬದುಕಿನ ಕರಾಳ ಸತ್ಯವೊದಂನ್ನು ಬಿಚ್ಚಿಟ್ಟಿದ್ದಾರೆ.

ನನಗಿರುವುದು ಒಂದೇ ಕಿಡ್ನಿ ಎನ್ನುವ ಅಚ್ಚರಿ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ. ನೀವು ನಂಬುತ್ತಿರೋ? ಇಲ್ಲವೋ? ನನಗೆ ಒಂದೇ ಕಿಡ್ನಿ ಇದ್ದರೂ ವಿಶ್ವದ ಪ್ರಮುಖ ಅಥ್ಲೀಟ್ ಗಳಾಗಿ ಬೆಳೆದವರಲ್ಲಿ ನಾನು ಒಬ್ಬಳಾಗಿದ್ದೇನೆ. ಸಣ್ಣ ನೋವು ನಿವಾರಕ ಮಾತ್ರೆ ನುಂಗಿದರೆ ಕೂಡ ನನಗೆ ಅಲರ್ಜಿಯಾಗುತ್ತದೆ. ಅಂತಹುದರಲ್ಲಿಯೂ ನಾನು ಸಾಧಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಒಂದೇ ಕಿಡ್ನಿ ಇದ್ದರೂ ಸಾಧನೆಗೆ ಅಡ್ಡಿಯಾಗಲಿಲ್ಲ ಎಂದು ಭಾರತದ ಖ್ಯಾತ ಕ್ರೀಡಾಪಟು, ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಹೇಳಿದ್ದಾರೆ.

ಇದನ್ನು ಜಾದು ಎನ್ನಬೇಕೆ ಅಥವಾ ತರಬೇತುದಾರರ ಪ್ರತಿಭೆ ಎನ್ನಬೇಕೆ ಗೊತ್ತಿಲ್ಲವೆಂದು ಅವರು ತಿಳಿಸಿದ್ದಾರೆ. ಅಂಜು ಬಾಬಿ ಜಾರ್ಜ್ ಅವರು 2003 ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಸೇರಿದಂತೆ ಹಲವು ಪದಕ ಗಳಿಸಿದ್ದಾರೆ.

- Advertisement -
spot_img

Latest News

error: Content is protected !!