Thursday, June 4, 2026
Homeಕರಾವಳಿಎಸ್‌ಡಿಪಿಐ ಆತೂರು ವಲಯದ ವತಿಯಿಂದ ಕಾರ್ಯಕರ್ತರ ಸಮಾವೇಶ ಮತ್ತು ಅಭ್ಯರ್ಥಿ ಘೋಷಣಾ ಕಾರ್ಯಕ್ರಮ

ಎಸ್‌ಡಿಪಿಐ ಆತೂರು ವಲಯದ ವತಿಯಿಂದ ಕಾರ್ಯಕರ್ತರ ಸಮಾವೇಶ ಮತ್ತು ಅಭ್ಯರ್ಥಿ ಘೋಷಣಾ ಕಾರ್ಯಕ್ರಮ

- Advertisement -
- Advertisement -

ಉಪ್ಪಿನಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆತೂರು ವಲಯದ ವತಿಯಿಂದ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯ ಮೊದಲ ಹಂತದ ಅಭ್ಯರ್ಥಿಗಳ ಘೋಷಣೆ ಮತ್ತು ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಪಕ್ಷದ ಕಛೇರಿ ಬಳಿ ಹಲವಾರು ಗಣ್ಯರ ಸಮ್ಮುಖದಲ್ಲಿ ನೂತನ ಸೇವಾ ಕೇಂದ್ರವನ್ನು ಉದ್ಘಾಟಿಸಲಾಯಿತು.

ನೂತನ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯರಾದ ರಿಯಾಝ್ ಪರಂಗಿಪೇಟೆ ಪ್ರಸಕ್ತ ಕಾಲಘಟ್ಟದಲ್ಲಿ ಎಸ್‌ಡಿಪಿಐ ಪಕ್ಷದ ಅನಿವಾರ್ಯತೆ, ಮತ್ತು ಇತರ ನಕಲಿ ಜಾತ್ಯಾತೀತ ಪಕ್ಷದ ದುರಾಢಳಿತ, ಕೋಮುವಾದಿ ಪಕ್ಷಗಳ ಜೊತೆ ಮೃದು ಹಿಂದುತ್ವದ ಮೂಲಕ ಮುಗ್ಧ ಮತದಾರರ ವಂಚಿಸಿದ ರೀತಿ, ಮುಸ್ಲಿಮರು, ದಲಿದರು ಸೇರಿದಂತೆ ದೇಶದೆಲ್ಲೆಡೆ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಒಂದೊಂದಾಗಿ ವಿವರಿಸಿದರು.

ಪ್ರಜಾತಂತ್ರದ ಅಡಿಪಾಯವಾದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಸ್‌ಡಿಪಿಐ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾದಂತಹ ನಕಲಿ ಜಾತ್ಯಾತೀತ ಪಕ್ಷ ಹಾಗೂ ಕೋಮುವಾದಿ ಬಿಜೆಪಿ ಪಕ್ಷಗಳನ್ನು ಸೋಲಿಸಬೇಕೆಂದು ಮತದಾರರಿಗೆ ಕರೆನೀಡಿದರು.

ಈ ಸಂದರ್ಭದಲ್ಲಿ ಆಲ್ ಇಂಡಿಯಾ ಇಮಾಂ ಕೌನ್ಸಿಲ್ ರಾಷ್ಟ್ರೀಯ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ ಸೇವಾ ಕೇಂದ್ರದ ದುವಾರ್ಶಿವಚನಗೈದು ಮಾತನಾಡಿ ನಾವು ನಂಬಿಕೊಂಡು ಬಂದಂತಹ ಪಕ್ಷಗಳು ಗೆದ್ದ ಕೂಡಲೇ ಬಿಜೆಪಿಯೊಂದಿಗೆ ಸಖ್ಯ ಬೆಳೆಸುವುದು, ಅನ್ಯಾಯದ ವಿರುದ್ಧ ಧ್ವನಿಯೆತ್ತದೇ, ಹಲವಾರು ಕಡೆಗಳಲ್ಲಿ ಮಹಾ ಘಟಬಂಧನ್ ತೊರೆದು ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದ್ದು ಇಂತಹ ಪಕ್ಷಕ್ಕೆ ನಂಬಿ ಮತ ಹಾಕಿದ ನಾವು ಮೂರ್ಖರಾಗಿದ್ದೇವೆ, ಪ್ರಸ್ತುತ ಕಾಲಘಟ್ಟದಲ್ಲಿ ಪರ್ಯಾಯವಾಗಿ ಪಕ್ಷದ ನಿಲುವು ಮತ್ತು ಬದ್ಧತೆಯನ್ನು ಕಂಡು ಎಸ್‌ಡಿಪಿಐ ಪಕ್ಷವನ್ನು ಬೆಂಬಲಿಸಿ ಗೆಲ್ಲಿಸಬೇಕೆಂದು ಹೇಳಿದರು.

ಪಿಎಫ್ಐ ಉಪ್ಪಿನಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮೆಜೆಸ್ಟಿಕ್ ಪಕ್ಷಕ್ಕೆ ಸಂಘಟನೆಯ ಬೆಂಬಲ ಮತ್ತು ಹಿತವಚನ ನೀಡಿದರು. ಈ ಸಂದರ್ಭದಲ್ಲಿ ಎಸ್‌ಡಿಪಿಐ ಕಡಬ ತಾಲೂಕು ಕಾರ್ಯದರ್ಶಿ ಮಹಮ್ಮದ್ ರಫೀಕ್ ನೆಲ್ಯಾಡಿ ಪ್ರಥಮ ಹಂತದ ಪಕ್ಷದ ಅಭ್ಯರ್ಥಿಗಳ ಘೋಷಣೆಯನ್ನು ಮಾಡಿದರು.

ಅಭ್ಯರ್ಥಿಗಳ ವಿವರ:
ಕೊಯಿಲ ಗ್ರಾಮ ವಾರ್ಡ್ 01:
ಹಸನ್ ಸಜ್ಜಾದ್ ಆತೂರು,
ಸಫಿಯಾ ಕೊಯಿಲ.

ಕೊಯಿಲ ಗ್ರಾಮದ ವಾರ್ಡ್ 02:
ಹಂಝ ಬಡ್ಡಮೆ.

ಕೊಯಿಲ ಗ್ರಾಮ ವಾರ್ಡ್ 03:
ಅಬ್ದುಲ್ ರಹಿಮಾನ್,

ಕೊಯಿಲ ಗ್ರಾಮ ವಾರ್ಡ್ 05:
ತುಫೈಲ್ ಕೆಎಂ,
ಹುಸೈನ್ ಸಿರಾಜ್ ಜಿಎಂ

ರಾಮಕುಂಜ ಗ್ರಾಮ ವಾರ್ಡ್ 02:
ಶರೀಫ್ ಬಿಎಸ್,
ಆಯಿಷಾ ಷರೀಫಾ

ರಾಮಕುಂಜ ಗ್ರಾಮ ವಾರ್ಡ್ 03:
ಅಬ್ದುಲ್ ಖಾದರ್ ಬಿಎಸ್

ಮುಂತಾದವರನ್ನು ಮೊದಲ ಹಂತದ ಅಭ್ಯರ್ಥಿಗಳಾಗಿ ಘೋಷಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಆತೂರು ವಲಯಾಧ್ಯಕ್ಷರಾದ ಇಸ್ಮಾಯಿಲ್ ಆತೂರು ಅಧ್ಯಕ್ಷತೆಯನ್ನು ವಹಿಸಿದ್ದರು, ಪಿಎಫ್ಐ ವಲಯಾಧ್ಯಕ್ಷರಾದ ರಶೀದ್ ಮಠ, ಉಪ್ಪಿನಂಗಡಿ ಎಸ್‌ಡಿಪಿಐ ವಲಯಾಧ್ಯಕ್ಷರಾದ ಮುಸ್ತಫಾ ಮುಸ್ಲಿಯಾರ್, ಎಸ್‌ಡಿಪಿಐ ಕಡಬ ತಾಲೂಕು ಜೊತೆ ಕಾರ್ಯದರ್ಶಿ ಬಶೀರ್ ಹೇಂತಾರ್ ಹೀಗೆ ಹಲವರು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹುಸೈನ್ ಸಿರಾಜ್ ಜಿಎಂ ಸ್ವಾಗತಿಸಿ, ಅಬ್ದುಲ್ ಗಫ್ಪಾರ್ ಕೆಮ್ಮಾರ ನಿರೂಪಿಸಿದರು.

- Advertisement -

Latest News

error: Content is protected !!