Wednesday, June 3, 2026
Homeಕರಾವಳಿಉಡುಪಿಬೆಂಗಳೂರಿನಲ್ಲಿ ಒಳನಾಡು ಮೀನು ಉತ್ಪಾದಕರ ಸಮಾವೇಶಕ್ಕೆ ಚಾಲನೆ

ಬೆಂಗಳೂರಿನಲ್ಲಿ ಒಳನಾಡು ಮೀನು ಉತ್ಪಾದಕರ ಸಮಾವೇಶಕ್ಕೆ ಚಾಲನೆ

- Advertisement -
- Advertisement -

ಬೆಂಗಳೂರು: 2022ರ ಸಾಲಿನ ಒಳನಾಡು ಮೀನು ಉತ್ಪಾದಕರ ಸಮಾವೇಶಕ್ಕೆ ಚಾಲನೆ ನೀಡಲಾಗಿದೆ.ಬೆಂಗಳೂರು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸಮಾವೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಚಾಲನೆ ನೀಡಿದ್ದಾರೆ

ಮೀನುಗಾರಿಕೆ ಇಲಾಖೆ ಮತ್ತು ಫ್ರೀಡಂ ಆ್ಯಪ್ ಸಹಯೋಗದಲ್ಲಿ ನಡೆಯುತ್ತಿರುವ ಮೀನು ಉತ್ಪಾದಕರ ಸಮಾವೇಶದಲ್ಲಿ ಮೀನುಗಾರಿಕಾ ಸಚಿವ ಎಸ್. ಅಂಗಾರ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಾಗೂ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಸಮಾವೇಶಕ್ಕೆ ಚಾಲನೆ ನೀಡುವ ಮೊದಲು ಮೀನು ಕೃಷಿಗೆ ಸಂಬಂಧಿಸಿದಂತೆ ತೆರೆದಿರುವ ಸ್ಟಾಲ್ ಗಳು, ಸ್ಟಾಲ್ ಗಳಲ್ಲಿನ ಮೀನು ಆಹಾರ, ಮೀನು ಕೃಷಿ ಪರಿಕರಗಳನ್ನು ಸಿಎಂ ಬೊಮ್ಮಾಯಿ ವೀಕ್ಷಿಸಿದರು.

- Advertisement -

Latest News

error: Content is protected !!