Wednesday, June 24, 2026
Homeತಾಜಾ ಸುದ್ದಿವೈದ್ಯ ಅಪಘಾತದಲ್ಲಿ ಗಾಯಗೊಂಡು ನರಳುತ್ತಿದ್ದರೂ ಕಾರಿನಿಂದ ಇಳಿಯದ ಬಿಜೆಪಿ ಶಾಸಕ ಸುರೇಶ್ ಗೌಡ

ವೈದ್ಯ ಅಪಘಾತದಲ್ಲಿ ಗಾಯಗೊಂಡು ನರಳುತ್ತಿದ್ದರೂ ಕಾರಿನಿಂದ ಇಳಿಯದ ಬಿಜೆಪಿ ಶಾಸಕ ಸುರೇಶ್ ಗೌಡ

- Advertisement -
- Advertisement -

ಚಿಕ್ಕಮಗಳೂರು: ಅಪಘಾತದಲ್ಲಿ ವೈದ್ಯರೋರ್ವರು ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರೂ, ಕಾರಿನಿಂದ ಇಳಿಯದ ಶಾಸಕನ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಲಕ್ಕವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ರಮೇಶ್‌ ಅವರು ತಮ್ಮ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದರು. ಈ ಸಂದರ್ಭ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಸಮೀಪ ಅಪರಿಚಿತ ವಾಹನವೊಂದು ಢಿಕ್ಕಿಯಾಗಿ ಅಪಘಾತವಾಗಿದೆ. ಇದೇ ಸಮಯದಲ್ಲಿ ಬಿಜೆಪಿ ಶಾಸಕ‌ ಡಿ.ಎಸ್.ಸುರೇಶ್ ಅವರ ಕಾರು ಅಲ್ಲಿಗೆ ಬಂದಿದೆ. ರಕ್ತದ ಮಡುವಿನಲ್ಲಿ ವೈದ್ಯ ಒದ್ದಾಡುತ್ತಿದ್ದರೂ ಶಾಸಕರು ಮಾತ್ರ ಕಾರಿನಿಂದ ಇಳಿದು ಬರಲೇ ಇಲ್ಲ. ಕಾರಿನಿಂದ ಶಾಸಕರ ಗನ್‌ ಮ್ಯಾನ್‌ ಇಳಿದುಬಂದರೂ ಕೂಡಾ ಶಾಸಕರು ಬಂದು ನೆರವು ಮಾಡುವ ಮನಸ್ಸೇ ಮಾಡಲಿಲ್ಲ.

ಘಟನೆ ನಡೆದು ಅರ್ಧ ಗಂಟೆಯ ಬಳಿಕ ಆಂಬ್ಯುಲೆನ್ಸ್‌ ಬಂದಿದ್ದು, ರಮೇಶ್‌ ಅವರನ್ನು ಶಿವಮೊಗ್ಗಕ್ಕೆ ಕರೆದೊಯ್ಯಲಾಯಿತು. ಆದರೆ, ಅವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

- Advertisement -

Latest News

error: Content is protected !!