Wednesday, November 29, 2023
Homeಉದ್ಯಮಮುಂಗಡ ಟಿಕೆಟ್ ಬುಕ್ ಮಾಡಿದ್ದ ರೈಲ್ವೆ ಪ್ರಯಾಣಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಮುಂಗಡ ಟಿಕೆಟ್ ಬುಕ್ ಮಾಡಿದ್ದ ರೈಲ್ವೆ ಪ್ರಯಾಣಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

- Advertisement -
- Advertisement -

ನವದೆಹಲಿ : ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮೇ. 3 ರವರೆಗೆ ಲಾಕ್ ಡೌನ್ ಅವಧಿ ವಿಸ್ತರಣೆ ಮಾಡಲಾಗಿದ್ದು, ಏಪ್ರಿಲ್ 15 ರಿಂದ ಮೇ. 3 ರವರೆಗೆ ಕಾಯ್ದಿರಿಸಿದ್ದ ಎಲ್ಲಾ ರೈಲ್ವೆ ಟಿಕೆಟ್ ಗಳನ್ನು ರದ್ದುಪಡಿಸಲಾಗಿದೆ.

ಏಪ್ರಿಲ್ 15 ರಿಂದ ಮೇ.3 ರವರೆಗೆ ಪ್ರಯಾಣಕ್ಕಾಗಿ ಕಾಯ್ದಿರಿಸಿದ್ದ ಸುಮಾರು 39 ಲಕ್ಷ ಟಿಕೆಟ್ ಗಳನ್ನು ಭಾರತೀಯ ರೈಲ್ವೆ ಇಲಾಖೆ ರದ್ದುಗೊಳಿಸಲು ನಿರ್ಧರಿಸಿದ್ದು, ಮೇ.3 ರವರೆಗೆ ರದ್ದಾದ ರೈಲುಗಳಿಗೆ ಶುಲ್ಕವನ್ನು ಸಂಪೂರ್ಣ ಮರುಪಾವತಿ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೌಂಟರ್ ಗಳಲ್ಲಿ ಬುಕ್ ಮಾಡಿದವರು ಜುಲೈ 31 ರವರೆಗೆ ಮರುಪಾವತಿ ಪಡೆದುಕೊಳ್ಳಬಹುದು.

ಮೇ. 3 ರ ಮಧ್ಯರಾತ್ರಿಯವರೆಗೆ ಎಲ್ಲಾ ರೀತಿಯ ಟಿಕೆಟ್ ಕೌಂಟರ್ ಗಳು ಮುಚ್ಚಲ್ಪಡುತ್ತವೆ. ಮುಂದಿನ ಆದೇಶದವರೆಗೆ ಇ-ಟಿಕೆಟ್ ಸೇರಿದಂತೆ ರೈಲು ಟಿಕೆಟ್ ಗಳ ಮುಂಗಡ ಕಾಯ್ದಿರಿಸುವಿಕೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.

- Advertisement -
spot_img

Latest News

error: Content is protected !!